ವೇಣೂರು ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರುಗಳ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ

ವೇಣೂರು : 1400 ವರ್ಷಗಳ ಇತಿಹಾಸ ಇರುವ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಇಂದು (ಎ.29ರಂದು) ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರುಗಳ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮವು ಸೀಮೆಯ ಅರಸರಾದ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಿತು.
ಸೋಮವಾರ ಮಧ್ಯಾಹ್ನವೇ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನ ಕಟ್ಟಡವನ್ನು ತೆಗೆಯುವ ಕಾರ್ಯಕ್ಕೆ ಭಕ್ತಾಧಿಗಳೇ ಚಾಲನೆ ನೀಡಿದರು. ಸುತ್ತುಪೌಳಿಯ ಹಂಚುಗಳನ್ನು, ರೀಪು, ಪಕ್ಕಾಸುಗಳನ್ನು ಕರಸೇವೆಯ ಮೂಲಕ ತೆಗೆಯಲಾಯಿತು.
ಋಷಿ ಮುನಿಗಳಿಂದ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿರುವ ಶ್ರೀ ಮಹಾಲಿಂಗೇಶ್ವರ ದೇವರ ಲಿಂಗವನ್ನು ತಂತ್ರಿಗಳಾದ ನಡ್ವಂತಾಡಿ ವೇ|ಮೂ| ಶ್ರೀಪಾದ ಪಾಂಗಣ್ಣಾಯರು ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ತೆಗೆದು ಹಳೆಯ ಸಾನಿಧ್ಯವನ್ನು ಸಂಕೋಚಗೊಳಿಸಿ ನೂತನ ಪೀಠ ಬಿಂಬಗಳಿಗೆ ಐಕ್ಯವನ್ನು ಬರಿಸಿ ಸಾನಿಧ್ಯವನ್ನು ಪುಷ್ಟಿಗೊಳಿಸಿದರು. ಎತ್ತುವಿಗೆ ಹಗ್ಗವನ್ನು ಕಟ್ಟಿ ಎಳೆಯುವ ಮೂಲಕ ಶ್ರೀ ದೇವರ ಲಿಂಗ ಹಾಗೂ ಮುಗುಳಿಯನ್ನು ವೈಧಿಕ ವಿಧಾನಗಳೊಂದಿಗೆ ತೆಗೆಯಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.