ಕಳಿಯ: ಗಾಳಿ ಮಳೆಗೆ ರಸ್ತೆಗುರುಳಿದ ವಿದ್ಯುತ್ ಕಂಬ, ಹಲವೆಡೆ ಮನೆಗಳಿಗೆ ಹಾನಿ

ಪರಪ್ಪು- ಎರುಕಡಪ್ಪು ರಸ್ತೆಗೆ ತುಂಡಾಗಿ ಬಿದ್ದಿರುವ ವಿದ್ಯುತ್ ಕಂಬಗಳು.
ಪೆಲ್ತಳಿಕೆ ನಾಣ್ಯಪ್ಪ ಗೌಡರ ವಾಸದ ಮನೆ ಮತ್ತು ದನದ ಹಟ್ಟಿಯ ಮಾಡು.

ಕಳಿಯ: ಎ.27 ರಂದು ಸಂಜೆ ಕಳಿಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ  ಸುರಿದ ಮಳೆ, ಭೀಕರ ಬಿರುಗಾಳಿಗೆ ಸುಮಾರು 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗುರುಳಿ ಬಿದ್ದಿರುತ್ತದೆ.   ಪರಪ್ಪು ಎರುಕಡಪ್ಪು ರಸ್ತೆಯ ಪಕ್ಕದಲ್ಲಿರುವ ಪೆಲ್ತಳಿಕೆ ಸಮೀಪದ ಮೂರು ಕಂಬಗಳು ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನಗಳ ಸಂಸಾರಕ್ಕೆ ತಡೆ ಉಂಟಾಯಿತು. ತಕ್ಷಣ ಮೆಸ್ಕಾಂ ಇಲಾಖೆ ಲೈನ್ ಮನ್ ಶೀನ ಹಾಗೂ ಸಹಾಯಕರು ಸ್ಥಳಕ್ಕೆ ಭೇಟಿ ನೀಡಿದರು. ಪಂ.ಸದಸ್ಯ ಕೆ.ಎಂ.ಅಬ್ದುಲ್ ಕರೀಂ, ಸ್ಥಳೀಯರಾದ ಉಸ್ಮಾನ್ ಸಾಹೇಬ್, ಪ್ರಸಾದ್, ಶರೀಫ್ ಹಾಗೂ ಸಾರ್ವಜನಿಕರು ಸೇರಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಸಹಕರಿಸಿದರು.

ಸುಣ್ಣಲಡ್ಡ ಸಮೀಪದ ಮುತ್ತಪ್ಪ ಶೆಟ್ಟಿ ಯವರ ಮನೆಗೆ ಬಿದ್ದಿರುವ ಮರದ ಕೊಂಬೆಗಳು

ಸುಣ್ಣಲಡ್ಡ ಸಮೀಪದ ನಿವಾಸಿ ಯೂಸುಫ್ ರವರ ಕೋಳಿ ಅಂಗಡಿಗೆ, ಮುತ್ತಪ್ಪ ಶೆಟ್ಟಿ, ಸುನೀತಾ ಶೆಟ್ಟಿ ಯವರ  ಮನೆಗಳಿಗೆ ದೊಡ್ಡ ಗಾತ್ರದ ಮಾವಿನ, ಹಲಸಿನ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ. ಪೆಲ್ತಳಿಕೆ ಸಮೀಪ ನಿವಾಸಿ ನಾಣ್ಯಪ್ಪ ಗೌಡರ ಮನೆಯ ಹಾಗೂ ದನದ ಹಟ್ಟಿಯ ಹೆಂಚು, ಸಿಮೆಂಟ್ ಸೀಟ್ ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿ  ನಷ್ಟವಾಗಿದೆ. ಮನ್ಸರ್ ಶಾಲಾ ಕಟ್ಟಡದ ಮಹಡಿಯ ಸ್ಟೀಲ್ ತಗಡು ಶೀಟುಗಳು ಗಾಳಿಗೆ ಹಾರಿ ಚೆಲ್ಲಾಪಿಲ್ಲಿಯಾಗಿದೆ.  ಕಳೆದ 2-3 ದಿನಗಳ ಕಾಲ ವಿದ್ಯುತ್ ಪೂರೈಕೆ ಇಲ್ಲದೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.