ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ವಾರ್ಷಿಕೋತ್ಸವ

ಬೆಳ್ತಂಗಡಿ: ತಾಲೂಕು ಭಂಡಾರಿ ಸಮಾಜ ಸಂಘದ 9ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಂಘದ ವಾರ್ಷಿಕೋತ್ಸವವು ಏ.23ರಂದು ಪಣೆಜಾಲಿನ ಭಂಡಾರಿ ಸಮಾಜ ಸಂಘದ ಆವರಣದಲ್ಲಿ ನಡೆಯಿತು.
ಬೆಳಿಗ್ಗೆ 9ರಿಂದ ಪ್ರಾರಂಭಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಸಂಘದ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವು ಸಂಘದ ಅಧ್ಯಕ್ಷ  ಎ. ಪೂವಪ್ಪ ಭಂಡಾರಿ ಪಣೆಜಾಲು ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಸಕಲೇಶಪುರ ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ,  ಕಚ್ಚೂರು ಶ್ರೀ ನಾಗೇಶ್ವರ ಉತ್ಸವ ಸಮಿತಿ ಅಧ್ಯಕ್ಷರಾಮ್ ಗಣೇಶ್ ಭಂಡಾರಿ ದಂಬೆ,  ತಲಪಾಡಿ ಭಂಡಾರಿ ಯುವ ವೇದಿಕೆ ದ. ಕ ಜಿಲ್ಲೆ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ,  ಮೂಡಬಿದ್ರೆ ಭಂಡಾರಿ ಸಮಾಜ ಸಂಘ ಅಧ್ಯಕ್ಷ ಕೆ.ಎನ್ ಪ್ರಕಾಶ್ ಭಂಡಾರಿ , ಬೆಂಗಳೂರು ಮೆಡಿಕಲ್ ಆಫಿಸರ್ ಡಾ| ರಮ್ಯವಲ್ಲಿ. ಕೆ , ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಭಂಡಾರಿ ಜನನಿ   ಕಾರ್ಯಕ್ರಮದಲ್ಲಿ  ಭಾಗವಹಿಸಿ ಭಂಡಾರಿ ಸಮಾಜ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದರು.
ಮಾ| ಸಮನ್ವಿತ್ ಭಂಡಾರಿ ಪಣೆಜಾಲು ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಎ. ಪೂವಪ್ಪ ಭಂಡಾರಿ ಪಣೆಜಾಲು ಪ್ರಾಸ್ತಾವಿಕವಾಗಿ ಮಾತನಾಡಿ , ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅಶೋಕ ಭಂಡಾರಿ ಗುಂಡ್ಯಲ್ಕೆ ವರದಿ ವಾಚಿಸಿದರು. ನಾರಾಯಣ. ಬಿ ಕುಂಡದಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಿಶ್ವನಾಥ ಭಂಡಾರಿ ಉಜಿರೆ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪಾರ್ಶ್ವವಾಯು ಪೀಡಿತರಾಗಿ ಆರ್ಥಿಕವಾಗಿ ಅಸಹಾಯಕರಾಗಿರುವ ರಾಜೇಶ್ ಕೊಡ್ಯೇಲ್ ಇವರಿಗೆ ಚಿಕಿತ್ಸೆಗಾಗಿ ಸಂಘದಿಂದ ಧನಸಹಾಯ ನೀಡಲಾಯಿತು.
ಮಧ್ಯಾಹ್ನ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತೀಶ್ ಭಂಡಾರಿ ನಾಳ, ಸಂದೀಪ್ ಭಂಡಾರಿ ಬೆಳ್ತಂಗಡಿ, ಕು| ಪ್ರತೀಕ್ಷಾ, ಕು| ಜಯಶ್ರೀ ಇವರು ತಮ್ಮ ಸುಶ್ರಾವ್ಯ ಕಂಠದಿಂದ ಸಂಗೀತ ರಸಮಂಜರಿ ನಡೆಸಿಕೊಟ್ಟರು. ವಿ.ಎಸ್ ಕಾರಂತ್ ಮ್ಯೂಸಿಕ್ಸ್ ಅಲಂಕಾರ್ ಸಂಗೀತದ ಸಾಥ್ ನೀಡಿದರು. ಮಾ| ಸಮನ್ವಿತ್ ಭಂಡಾರಿ ಪಣೆಜಾಲು, ಕು| ತನುಶ್ವಿ, ಕು| ಧೃತಿ ಭಂಡಾರಿ ಉಜಿರೆ, ಕು| ಧನ್ವಿ ಉಜಿರೆ ಇವರು ತಮ್ಮ ನೃತ್ಯ ವೈವಿಧ್ಯತೆಗಳಿಂದ ಪ್ರೇಕ್ಷಕರ ಮನರಂಜಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.