HomePage_Banner_
HomePage_Banner_

ಮಡಂತ್ಯಾರು: ಮದ್ಯವರ್ಜನ ಶಿಬಿರ

ದುಶ್ಚಟ ತ್ಯಾಜಿಸಿದರೆ ಬಾಳಿನಲ್ಲಿ ಬೆಳಕು

ಮಡಂತ್ಯಾರು: ದುಶ್ಚಟಗಳ ಮೂಲಕ ಮನುಷ್ಯ ಮಾಡುವ ಸಣ್ಣ ತಪ್ಪಿನಿಂದ ತನ್ ಆಯುಷ್ಯವನ್ನೇ ಕಳೆದುಕೊಳ್ಳುತ್ತಿದ್ದಾನೆ. ಅಂತವರ ಬಾಳಿನಲ್ಲಿ ಹೊಸ ಪರಿವರ್ತನೆ ತರುವ ಉದ್ದೇಶದಿಂದ ಮುದ್ಯವರ್ಜನ ಶಿಬಿರಗಳನ್ನು ಅಯೋಜಿಸಲಾಗುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ವಿವಿಧ ಸಂಸ್ಥೆಗಳ ಸಹಕಾರದಿಂದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ಆಯೋಜಿಸಿದ 1330ನೇ ಮದ್ಯವರ್ಜನ ಶಿಬಿರದಲ್ಲಿ ಎ.26ರಂದು ಮಾತನಾಡಿದರು.
ಮಡಂತ್ಯಾರು ಚರ್ಚ್‌ನ ಧರ್ಮಗುರು ಫಾ. ಬಾಸಿಲ್‌ವಾಸ್ ಮಾತನಾಡಿ ಧರ್ಮಸ್ಥಳ ಡಾ. ಹೆಗ್ಗಡೆಯವರು ಮಡಂತ್ಯಾರು ಚರ್ಚ್‌ಗೆ ಸಾಕಷ್ಟು ಕೊಡುಗೆ ನೀಡಿದ್ದು, ಅವರ ಸಹಕಾರ ಸ್ಮರಣೀಯ ಅವರ ತಂಡವು ಇಂತಹ ಶಿಬಿರಗಳ ಮೂಲಕ ವ್ಯಸನಿಗಳಿಗೆ ಹೊಸ ಬದುಕು ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ಪ್ರಾಂಶುಪಾಲ ಫಾ. ಜೆರೋಮ್ ಡಿ ಸೋಜ, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಪ್ರಗತಿಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ, ಶಾರದಾ ಆರ್. ರೈ, ಕಿಶೋರ್ ಕುಮಾರ್ ಹೆಗ್ಡೆ, ಅಡೂರ್ ವೆಂಕಟ್ರಾಯ್, ಅಬ್ದುಲ್‌ರಹಿಮಾನ್ ಪಡ್ಪು, ಧರ್ಮಸ್ಥಳದ ಶ್ರದ್ಧಾ ಅಮಿತ್, ಶೃತಾ, ಮಾನ್ಯ ಉಪಸ್ಥಿತರಿದ್ದರು.
ಶಿಬಿರಾರ್ಥಿ ಉಮೇಶ್ ತಣ್ಣೀರುಪಂತ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾಧಿಕಾರಿ ಮಾಧವ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಮೇಲ್ವಿಚಾರಕ ಸಚಿನ್ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.