ನಾರಾವಿ: ಮಹಾವೀರ ಜಯಂತಿ ಆಚರಣೆ-ಪದಗ್ರಹಣ

ವೇಣೂರು: ನಾರಾವಿ ದಿಗಂಬರ ಜೈನ ಯುವಜನ ಸಂಘ ಹಾಗೂ ಭಾರತೀಯ ಜೈನ್ ಮಿಲನ್ ಶಾಖೆಯ ಜಂಟಿ ಆಶ್ರಯದಲ್ಲಿ ಭಗವಾನ್ ಮಹಾವೀರರ 2618 ನೇ ಜಯಂತ್ಯುತ್ಸವ ಹಾಗೂ ಜೈನ್ ಮಿಲನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ಜರಗಿತು.
ಕಾರ್ಕಳದ ಖ್ಯಾತ ನ್ಯಾಯವಾದಿ ಎಂ.ಕೆ. ಸುವೃತ್ ಕುಮಾರ್ ಅವರು ಮಾತನಾಡಿ, ಮಹಾವೀರರ ಅಹಿಂಸ ತತ್ವವನ್ನು ಜೀವನದಲ್ಲಿ ಪಾಲಿಸಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕೆಂದು ಕರೆಯಿತ್ತರು. ಜೈನ್ ಮಿಲನ್‌ನ ವಲಯ 8ರ ನಿರ್ದೇಶಕ ಸೋಮಶೇಖರ ಶೆಟ್ಟಿಯವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವೇದಿಕೆಯಲ್ಲಿ ನ್ಯಾಯವಾದಿ ಪದ್ಮಪ್ರಸಾದ್ ಜೈನ್, ಬಸದಿಯ ಆಡಳಿತ ಸಮಿತಿ ಅಧ್ಯಕ್ಷ ಬಿ. ನಿರಂಜನ ಅಜ್ರಿ, ಕಾರ್ಯಾಧ್ಯಕ್ಷ ಪ್ರೇಮ್‌ಕುಮಾರ್, ಪ್ರ. ಕಾರ್ಯದರ್ಶಿ ಶಿಶುಪಾಲ್ ಜೈನ್, ದಿಗಂಬರ ಜೈನ ಯುವಜನ ಸಂಘದ ಅಧ್ಯಕ್ಷ ಜಿನೇಂದ್ರ ಜೈನ್, ಕಾರ್ಯದರ್ಶಿ ಜ್ವಾಲಾ ಪ್ರಸಾದ್, ಜೈನ್ ಮಿಲನ್ ಅಧ್ಯಕ್ಷ ನಿರಂಜನ ಜೈನ್, ಕಾರ್ಯದರ್ಶಿ ಅಶೋಕ್ ಕುಮಾರ್, ನೂತನ ಅಧ್ಯಕ್ಷ ಸನತ್ಕುಮಾರ್ ಜೈನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಬಳಿಕ ಸಿದ್ದಾಯಿನಿ ಮಹಿಳಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಹಿರಿಯ ಪಾಕಶಾಸ್ತ್ರ ತಜ್ಞ ಬಾಬು ಹೆಗ್ಡೆ ನೂರಳ್‌ಬೆಟ್ಟು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಪ್ರೇಮ್‌ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಅತುಲ್ ಸೇಮಿತ ವಂದಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.