ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ವಿವಿಧ ರಾಜ್ಯಗಳ ಸಹಕಾರಿ ಬ್ಯಾಂಕ್ ಪ್ರತಿನಿಧಿಗಳ ಭೇಟಿ

ಬಂಗಾಡಿ: ಸಹಕಾರಿ ರಂಗದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸೇವೆ ನೀಡುತ್ತಿರುವ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯಕ್ಕೆ ಮಾದರಿ ಸಹಕಾರಿ ಸಂಘವಾಗಿದ್ದು, ಇದರ ಕಾರ್ಯ ಚಟುವಟಿಕೆಗಳ ಅಧ್ಯಯನ ನಡೆಸಲು ತಮಿಳುನಾಡು, ಹರಿಯಾಣ, ಆಂದ್ರಪ್ರದೇಶ ಮತ್ತು ತೆಲಂಗಣಾ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 45 ಮಂದಿ ಮುಖ್ಯ ಕಾರ್ಯನಿರ್ವಹಣಧಿಕಾರಿಗಳ ತಂಡವು ಎ.23 ರಂದು ಸಂಘದ ನಾವೂರು ಶಾಖೆಗೆ ಭೇಟಿ ನೀಡಿದರು.ಸಂಘದ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ ಇವರು ಅಧಿಕಾರಿಗಳೊಂದಿಗೆ ಸಂಘದ ಪ್ರಗತಿ ಹಾಗೂ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಸ್ವ-ಸಹಾಯ ಸಂಘಗಳ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿ ರಂಜಿತ್ ಕುಮಾರ್ ಮತ್ತು ನವೋದಯ ಗುಂಪುಗಳ ಮೇಲ್ವಿಚಾರಕ ಜಯರಾಮ.ಕೆ ನೀಡಿದರು. ಈ ಸಂದರ್ಭದಲ್ಲಿ ಗಂಗೋತ್ರಿ ನವೋದಯ ಸ್ವ-ಸಹಾಯ ಸಂಘ ಕನ್ಯಾಡಿ ಮತ್ತು ಶುಭಾಷಿನಿ ನವೋದಯ ಸ್ವ-ಸಹಾಯ ಸಂಘ ಪರಾರಿ ನಾವೂರು, ಇದರ ಸದಸ್ಯರಿಂದ ತಂಡದ ಅಧಿಕಾರಿಗಳು ಮಾಹಿತಿಯನ್ನು ಪಡಕೊಂಡರು.
ಈ ಸಂದರ್ಭದಲ್ಲಿ ನಬಾರ್ಡಿನ ಬರ್ಡ್ ಸಂಸ್ಥೆಯ ಡಿ.ಜಿ.ಯಂ ಸಂಜೀವಿ, ಅಧಿಕಾರಿ ರವಿಶಂಕರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾಲತಾ ಕೆ., ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ನಿರ್ದೇಶಕರು ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.