ಬೇಜವಾಬ್ಧಾರಿಯಿಂದ ಅಪಾಯ…

ಮೊನ್ನೆ ತಾನೆ ಪುತ್ತೂರಿನಲ್ಲಿ ಅಧಿಕಾರಿಗಳ ಬೇಜವಾಬ್ಧಾರಿಯಿಂದ ಅರಳುವ ಕಂದಮ್ಮಗಳು ಮರಳಿ ಬರಲಾಗದ ಸ್ಥಿತಿ ಏರ್ಪಟ್ಟಿತು. ಇದೀಗ ಸರತಿ ಬೆಳ್ತಂಗಡಿಯದ್ದು.ಇಲ್ಲಿನ ಗುರುವಾಯನಕೆರೆ ಅಭಯಾ ಆಸ್ಪತ್ರೆಯ ಸ್ವಲ್ಪ ಮುಂದೆ ತಿರುವಿನಲ್ಲಿ, ಮನೆಯ ಆವರಣ ಗೋಡೆಯ ಹೊರಗೆ ಅಂದಾಜು ನಾಲ್ಕು ಅಡಿ ಸುತ್ತಳತೆಯ ಗುಂಡಿಯೊಂದನ್ನು ತೋಡಿಡಲಾಗಿದ್ದು ಇಲ್ಲೂ ಅಪಾಯ ಕಟ್ಟಿಟ್ಟ ಬುತ್ತಿ.ಒಂದು ತಿಂಗಳ ಹಿಂದೆಯೇ ಈ ಕಾಮಗಾರಿ ಇಲ್ಲಿ ನಡೆದಿದೆ. ಗುಂಡಿ ತೆಗೆದವರು ಕೆಲಸ ಪೂರೈಸಿ ಅದನ್ನು ಮುಚ್ಚುವ ಬದಲು ಇದೀಗ ತೆರೆದ ಗುಂಡಿ ಬಳಿ ಪತಾಕೆ ಕಟ್ಟಿ ಅಪಾಯದ ಮುನ್ಸೂಚನೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಈ ಪತಾಕೆ ಕೆಳಬಿದ್ದರೆ ಇಲ್ಲೊಂದು ಅಪಾಯಕಾರಿ ಗುಂಡಿ ಬಾಯ್ತೆರೆದು ನಿಂತಿದೆ ಎಂದು ಯಾರಿಗೂ ಗೋಚರವಾಗದು ಖಂಡಿತ. ಇದು ಯಾವುದೋ ಕೇಬಲ್ ಅಳವಡಿಕೆ ಉದ್ಧೇಶದ ಗುಂಡಿ ಇರಬಹುದು. ಯಾರೇ ಆಗಿರಲಿ ಇಲ್ಲಿ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತು ಈ ಗುಂಡಿಯನ್ನು ಮುಚ್ಚಿಸಿ ಸಂಭಾವ್ಯ ದುರಂತ ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.