ಎ.26-28: ನೀರಾಡಿ ಪಚ್ಚೆ ಪರ್ಬ

ಕಣಿಯೂರು: ಅರಿವು ಸಂಸ್ಥೆ ಈ ವರ್ಷ ಊರ ಯುವಜನ ಸಂಘಗಳ ಜೊತೆ ಸೇರಿಕೊಂಡು ಸ್ಥಳೀಯವಾಗಿ ಪರಿಸರ ಮತ್ತು ಜೀವಪರವಾಗಿ ಸಮುದಾಯ, ಮಕ್ಕಳು ಬೆಳೆಯುವಂತೆ ಪಚ್ಚೆಪರ್ಬವನ್ನು ಆಯೋಜಿಸುತ್ತಿದೆ.
ಮಹಾಚೇತನ ಯುವ ವೇದಿಕೆ ಮತ್ತು ಅರಿವು ಪಚ್ಚೆ ಬಳಗದ ಆಯೋಜನೆಯಲ್ಲಿ ಈ ವರ್ಷ ಕಣಿಯೂರು ಗ್ರಾಮದ ನೀರಾಡಿಯಲ್ಲಿ ಮೊತ್ತಮೊದಲ ಪಚ್ಚೆಪರ್ಬವು ವಿವಿಧ ಆಟ, ಚಟುವಟಿಕೆ, ನಾಟಕ, ಹಾಡು, ಸಿನಿಮಾ, ಸಂವಾದಗಳ ಮೂಲಕ ಎ.26ರಿಂದ ಎ.28ರವರೆಗೆ ಮೂರು ದಿನಗಳಲ್ಲಿ ನಡೆಯಲಿದೆ.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಸಾಂದೀಪನಿ ಸೇವಾಶ್ರಮ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ, ತುಳು ಸಾಹಿತಿ ಅಮೃತಾ ಶೆಟ್ಟಿ ಅತ್ರಾಡಿ, ರಂಗಭೂಮಿ ನಟರಾದ ಮೋಹನ ಶೇಣಿ, ರಂಗಕರ್ಮಿ ಕ್ರಿಸ್ಟೋಫರ್ ನೀನಾಸಂ, ಶಿಕ್ಷಣ ತಜ್ಞರಾದ ಅಕ್ಷತಾ ಕುಡ್ಲ, ಚೇತನ್ ಕೊಪ್ಪ, ರಂಗಾಯಣ ಮೈಸೂರಿನ ಜಯಶ್ರೀ ಇಡ್ಕಿದು, ರಂಗಭೂಮಿ ನಟಿ ಬಿಂದು ರಕ್ಷಿದಿ, ಕಲಾವಿದರಾದ ಶಿವಾನಂದ ನಾಯ್ಕ್ ಉಳಿ ಮತ್ತು ಜಯರಾಮ ನಾವಡ ಕಲ್ಲಡ್ಕ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.