ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನದದಲ್ಲಿ 10 ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ರಾತ್ರಿ ಅಗ್ನಿಗುಳಿಗ ದೈವಕ್ಕೆ ಸಿರಿ ಸಿಂಗಾರದ ಕೋಲ ಎ.17 ರಂದು ವಿಜೃಂಭಣೆಯಿಂದ ಜರುಗಿತು.
ಸಂಜೆ ಗಂಟೆ 5.30 ರಿಂದ ಶ್ರೀ ದೇವಿ ಭಗವತೀ ಅಮ್ಮ ಭಜನಾ ಮಂಡಳಿ, ಮೇಲಂತಬೆಟ್ಟು ಹಾಗೂ ಭಕ್ತರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7 ಕ್ಕೆ ಶ್ರೀ ದೇವಿಗೆ ಮಹಾ ರಂಗಪೂಜೆ, ಮಹಾಪೂಜೆ ಜರುಗಿತು. ರಾತ್ರಿ ಗಂಟೆ 9 ರಿಂದ 2 ಗಂಟೆ ತನಕ ಅಗ್ನಿಗುಳಿಗ ದೈವಕ್ಕೆ ಸಿರಿ ಸಿಂಗಾರದ ಕೋಲ ವೈಭವಪೂರ್ಣವಾಗಿ ನಡೆಯಿತು. ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಊರ ಹಾಗೂ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.