ಎ. ಪದ್ಮಯ ನಾಯ್ಕರವರಿಗೆ ಪಿ.ಹೆಚ್.ಡಿ. ಪದವಿ

Advt_NewsUnder_1
Advt_NewsUnder_1

ಕಡಿರುದ್ಯಾವರ: ಬೆಂಗಳೂರಿನ ಕೆಂಪೇಗೌಡ ರಸ್ತೆಯ ಕಾವೇರಿ ಭವನದಲ್ಲಿರುವ ಕರ್ನಾಟಕ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎ. ಪದ್ಮಯ ನಾಯ್ಕ ಇವರು ಮಂಗಳೂರು ವಿಶ್ವ ವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಕೆ. ಆರ್. ಚಂದ್ರಶೇಖರ್ ರವರ ಮಾರ್ಗ ದರ್ಶನದಲ್ಲಿ ಮಂಡಿಸಿದ ಇವಾಲ್ಯೂಯೇಸನ್ ಆಫ್ ಕ್ಯಾಶ್ಯೂ ವೆರೈಟೀಸ್ ಪಾರ್ ಕೋಸ್ಟಲ್ ರೀಜನ್ ಆಫ್ ಕರ್ನಾಟಕ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ 37 ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ. ಪದವಿ ಪ್ರದಾನ ಮಾಡಲಾಯಿತು.
ಡಾ.ಎ. ಪದ್ಮಯ ನಾಯ್ಕ ಕಡಿರುದ್ಯಾವರ ಗ್ರ್ರಾಮದ ಅರಮನೆಹಿತ್ಲು ದಿ| ಎ. ಬಾಬು ನಾಯ್ಕ ಮತ್ತು ದಿ| ಚೆನ್ನಕ್ಕ ರವರ ಪುತ್ರ ಬಿ.ಎಸ್ಸಿ (ಕೃಷಿ) ಪದವಿ ಹಾಗೂ ಎಂ.ಎಸ್ಸಿ (ಕೃಷಿ) ಪದವಿಯನ್ನು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದಿಂದ ಪಡೆದಿರುತ್ತಾರೆ. ಮೂಲತ: ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕಾರಿಯಾಗಿರುವ ಇವರು ಬೆಳ್ತಂಗಡಿ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಉಪ ಕೃಷಿ ನಿರ್ದೇಶಕರಾಗಿ, ಕೊಡಗು, ದಕ್ಷಿಣ ಕನ್ನಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಜಂಟಿ ಕೃಷಿ ನಿರ್ದೇಶಕರಾಗಿ, ಗುಲ್ಬರ್ಗದಲ್ಲಿರುವ ತೊಗರಿ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಪ್ರಸ್ತುತ ಕೃಷಿ ಆಯುಕ್ತಾಲಯದಲ್ಲಿ ಅಪರ ಕೃಷಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.