ಕೊಯ್ಯೂರು: ಅಪಾಯದ ಮಟ್ಟದಲ್ಲಿ ವಿದ್ಯುತ್ ಟಿ.ಸಿ

Advt_NewsUnder_1
Advt_NewsUnder_1

ಕೊಯ್ಯೂರು: ಕೊಯ್ಯೂರು ಗ್ರಾಮದ ಭಂಡಾರಿಕೋಡಿ, ಸಾದೂರು ಪರಿಸರದಲ್ಲಿ ಸುಮಾರು 53 ವರ್ಷಗಳ ಹಿಂದೆ ಅಳವಡಿಸಲಾದ ವಿದ್ಯುತ್ ತಂತಿ ಹಳೆಯದಾಗಿದ್ದು, ಇಲ್ಲಿಯ ಟಿ.ಸಿ ನೆಲಮಟ್ಟದಲ್ಲಿ ಕೈಗೆಟಕುತ್ತಿದ್ದು, ಟಿ.ಸಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಈ ಭಾಗದಲ್ಲಿ ಸಂಚರಿಸುವ ಸ್ಥಳೀಯರಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಅಪಾಯವನ್ನು ತಂದೊಡ್ಡಿದೆ.
ಕೊಯ್ಯೂರು ಭಾಗದಲ್ಲಿ ವಿದ್ಯುತ್ ಲೈನ್ ಎಳೆದು ಸುಮಾರು 53 ವರ್ಷಗಳೇ ಕಳೆದಿದೆ. ಇಲ್ಲಿಯ ಸಾಧೂರು ಹಾಗೂ ಇತರ ಕಡೆ ನಿರ್ಮಿಸಲಾದ ಟಿ.ಸಿ ನೆಲಮಟ್ಟದಲ್ಲಿದೆ. ಅಲ್ಲದೆ ಟಿ.ಸಿಯಿಂದ ವಿದ್ಯುತ್ ತಂತಿ ತುಂಡಾಗಿ ನೆಲದಲ್ಲಿ ಬಿದ್ದಿದೆ. ಟಿ.ಸಿಯು ನೆಲಮಟ್ಟದಲ್ಲಿರುವುದರಿಂದ ಹಾಗೂ ಆಗಾಗ ತಂತಿ ತುಂಡಾಗಿ ಬೀಳುತ್ತಿರುವುದರಿಂದ ಸಾರ್ವಜನಿಕರಿಗೆ, ಕೃಷಿಕರಿಗೆ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಬಗ್ಗೆ ಸ್ಥಳೀಯರಾದ ಯತೀಶ್ ಬಿ. ಸೇರಿದಂತೆ ನಾಗರಿಕರು ಮೆಸ್ಕಾಂ ಇಲಾಖೆಗೆ ದೂರು ನೀಡಿ, ಟಿ.ಸಿಯಿಂದ ಆಗಬಹುದಾದ ಅಪಾಯವನ್ನು ತಪ್ಪಿಸುವಂತೆ ಆಗ್ರಹಿಸಿದ್ದಾರೆ.

ರೂ.8.89ಕೋಟಿ ಮಂಜೂರು: ಜನರ ಬೇಡಿಕೆಯನ್ವಯ ಮೆಸ್ಕಾಂ ಇಲಾಖೆ ಪರಿವರ್ತಕಗಳ ಹಳೆಯದಾದ ತಂತಿಗಳನ್ನು ಬದಲಾಯಿಸಲು ಹಾಗೂ ಮಧ್ಯಂತರ ಕಂಬಗಳನ್ನು ಅಳವಡಿಸಲು ರೂ.8.89 ಕೋಟಿ ವೆಚ್ಚದ ವಿಸೃತ ಯೋಜನೆಯನ್ನು ಮಂಜೂರುಳಿಸಿ, ಕಾಮಗಾರಿಯನ್ನು ಬಂಟ್ವಾಳದ ಲೆವಿನ್ ಇಲೆಕ್ಟ್ರೀಕಲ್ಸ್‌ನವರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕಂಬ ಹಾಕುವ ಕಾಮಗಾರಿ ನಡೆಯುತ್ತಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.