ಮತದಾನ ನಡೆದ ಶಾಲಾ ಕೊಠಡಿಗಳಿಗೆ ಬೀಗ ಹಾಕದೇ ತೆರಳಿದ ಅಧಿಕಾರಿಗಳು..|?

Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು: ಶಾಲಾ ಕೊಠಡಿಗಳನ್ನು ಚುನಾವಣೆಯಲ್ಲಿ ಮತದಾನಕ್ಕಾಗಿ ಬಳಕೆ ಮಾಡಿ ಸಂಜೆ ಮತದಾನ ಆದ ಬಳಿಕ ಕೊಠಡಿಯ ಬಾಗಿಲು ಹಾಕಿ ಬೀಗ ಹಾಕುವವರು ಯಾರು..? ಎಂಬ ಪ್ರಶ್ನೆ ಕೊಯ್ಯೂರು ಆದೂರ್ ಪೆರಾಲ್ ಶಾಲೆಯಲ್ಲಿ ಉಂಟಾಗಿದೆ.
ಎ.18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಯ್ಯೂರು ಆದೂರ್ ಪೆರಾಲ್ ಶಾಲೆಯ ಎರಡು ಕೊಠಡಿಗಳನ್ನು ಬಳಕೆ ಮಾಡಲಾಗಿತ್ತು. ಸಂಜೆಯವರೆಗೆ ಮತದಾನ ನಡೆದು ಬಳಿಕ ಮತಕಟ್ಟೆ ಅಧಿಕಾರಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಮತ ಪೆಟ್ಟಿಗೆ ಜೊತೆ ಅಲ್ಲಿಂದ ತೆರಳಿದರು. ಆದರೆ ಶಾಲೆಯ ಎರಡು ಕೊಠಡಿಗೂ ಬಾಗಿಲು, ಬೀಗ ಹಾಕಲಿಲ್ಲ. ಸುಮಾರು ಮೂರು ದಿನಗಳ ಕಾಲ ಕೊಠಡಿಗಳ ಬಾಗಿಲು ತೆರೆದು ಕೊಂಡೇ ಇತ್ತು. ಇದನ್ನು ಗಮನಿಸಿದ ಸ್ಥಳೀಯರು ಇದನ್ನು ಶಾಲಾ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದರು. ಆದರೆ ಅವರು ದೂರದ ಊರಿನವರಾದ್ದರಿಂದ ರಜೆಯಲ್ಲಿ ಊರಿಗೆ ತೆರಳಿದ್ದರು. ಮತದಾನ ನಡೆದ ಶಾಲಾ ಕೊಠಡಿಗಳು ತೆರೆದುಕೊಂಡೇ ಇರುವುದನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ವೈರಲ್ ಆಗಿದೆ.
ನಾಲ್ಕು ದಿನಗಳಲ್ಲಿ ಯಾರೂ ಕೊಠಡಿಗಳಿಗೆ ಬಾಗಿಲು ಹಾಕಿ ಬೀಗ ಹಾಕದಿರುವುದನ್ನು ತಿಳಿದ ಸ್ಥಳೀಯ ಶಿಕ್ಷಣ ಪ್ರೇಮಿ ಹಾಗೂ ಅಂಗಡಿಯನ್ನು ಹೊಂದಿರುವ ವಿನಯ ಅವರು ಎರಡು ಕೊಠಡಿಗಳ ಬಾಗಿಲುಗಳನ್ನು ಹಾಕಿ ಭದ್ರಪಡಿಸಿದರು. ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳು ಈ ಕಾರ್ಯವನ್ನು ಮಾಡಬೇಕೆ? ಅಥವಾ ಶಾಲಾ ಮುಖ್ಯೋಪಾಧ್ಯಾಯರು ಇದಕ್ಕೆ ಜವಾಬ್ದಾರರೇ ಎಂಬ ಚರ್ಚೆ ಗ್ರಾಮದಲ್ಲಿ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.