ಅಮೇಥಿ, ವಾರಣಾಸಿ ಸ್ವರ್ಗವಾಗಿಲ್ಲ. ಸಮಸ್ಯೆ ಬೇಡಿಕೆಗಳು ನೂರಾರು ಇವೆ

ವಿಷಯಾಧಾರಿತವಾಗಿ ನಮ್ಮಂತೆ ಸ್ಪರ್ಧಿಸುವವರು ಹಲವಾರು ಮಂದಿ ಇದ್ದಾರೆ

ಪ್ರಧಾನಿ ಮೋದಿಯವರು ಪ್ರತಿನಿಧಿಸುತ್ತಿರುವ ಮತ್ತು ಈಗ ಸ್ಪರ್ಧಿಸುತ್ತಿರುವ ವಾರಣಾಸಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಲವಾರು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಮತ್ತು  ಈಗ ಸ್ಪರ್ಧಿಸುತ್ತಿರುವ ಅಮೇಥಿಯಲ್ಲಿ ಸಾಂಕೇತಿಕವಾಗಿಯಾದರೂ ಸ್ಪರ್ಧಿಸಲು ಇಚ್ಛಿಸಿದಾಗ ಅಂತಹ ಘಟಾನುಘಟಿಗಳ ಕ್ಷೇತ್ರ ಹೇಗಿರಬಹುದು? ಅಭಿವೃದ್ಧಿಯ ಬಗ್ಗೆ ಅಲ್ಲಿ ಹೇಳಲು ಏನಾದರು ವಿಷಯ ಸಿಗಬಹುದೇ? ಅವರ ಎದುರು ಸ್ಪರ್ಧಿಸಿದರೆ ಅಲ್ಲಿಯ ಜನರು ಸುಮ್ಮನಿದ್ದಾರೇ? ಎಂಬ ಸಣ್ಣ ಮಟ್ಟಿನ ಆತಂಕ ಇತ್ತು.

ಆದರೆ ಅಲ್ಲಿಗೆ ಹೋದಾಗ ಅಲ್ಲಿಯ ಮತದಾರರು ಆ ನಾಯಕರನ್ನು ಕ್ಷೇತ್ರದ ಪ್ರತಿನಿಧಿಗಳು ಮತ್ತು ಸ್ಪರ್ಧಿಗಳೆಂದೂ, ಅತ್ಯಂತ ಸಮರ್ಥ ನಾಯಕರೆಂದೂ ನೋಡುತ್ತಿದ್ದಾರೆಯೇ ಹೊರತು ಪವಾಡಪುರುಷರೆಂದು(ದೇವರಂತೆ) ಅಲ್ಲ. ಅಲ್ಲಿಯ ಜನತೆಗೆ ತಮ್ಮ ಮತದಿಂದ ಅವರು ಗೆಲ್ಲುತ್ತಾರೆ ಎಂಬ ಸತ್ಯದ ಅರಿವಿದೆ. ರಾಹುಲ್ ಗಾಂಧಿ ಮತ್ತು ಮೋದಿಯವರು, ದೇಶದ ಇತರ ಕ್ಷೇತ್ರದ ಜನತೆ ಹಾಕಿದ ಮತದಿಂದ ಇಲ್ಲಿ ಗೆಲುವು ಅಲ್ಲ. ಇಲ್ಲಿಯವರ ಪ್ರತಿಯೊಂದು ಮತದಿಂದ ಮಾತ್ರ ಗೆಲುವು ಸಾಧ್ಯ ಎಂಬ ತಿಳುವಳಿಕೆಯಿಂದ ಅಲ್ಲಿಯ ಜನರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಕಳೆದ ಬಾರಿ ಮೋದಿಜಿಯವರು ವಡೋದರ ಮತ್ತು ವಾರಣಾಸಿಯಿಂದ ಸ್ಪರ್ಧಿಸಿದ್ದರು. ಈ ಬಾರಿ ರಾಹುಲ್ ಗಾಂಧಿಯವರು ಅಮೇಥಿ ಮತ್ತು ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ. ಅವರನ್ನು ವಿರೋಧಿಸುವವರೂ ಇದ್ದಾರೆ. ಅವರ ಪರವಾಗಿ ವಾದಿಸುವವರೂ ಇದ್ದಾರೆ.
ಅಮೇಥಿಯಲ್ಲಿ ಪಕ್ಷದವರು ಸೇರಿದಂತೆ ಒಟ್ಟು 32 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಣ್ಣು ಕಾಣದ(ಅಂಧ) ವ್ಯಕ್ತಿ ಕೂಡ ತನ್ನದೇ ಕಾರಣ ಮುಂದಿಟ್ಟು ಸ್ಪರ್ಧಿಸಿದ್ದಾರೆ. ಅಲ್ಲಿಯ ಇತರ ಸ್ಪರ್ಧಿಗಳು ಬೇರೆ ಬೇರೆ ಉಶಗಳನ್ನಿಟ್ಟು ಸ್ಪರ್ಧಿಸುತ್ತಿರುವುದು ಪ್ರಜಾಪ್ರಭುತ್ವದ ಶಕ್ತಿಯ ಸಂಕೇತ ಎಂದು ಹೇಳಲು ಸಂತೋಷ ಪಡುತ್ತೇನೆ. ನಾವು ವೋಟಿನ ಬೆಂಬಲ ಕೇಳದಿದ್ದರೂ ನಮ್ಮ ಆಶಯಗಳಿಗೆ ಬೆಂಬಲ ನೀಡಲು ಬಹಳಷ್ಟು ಮಂದಿ ಮುಂದೆ ಬಂದಿದ್ದಾರೆ. ಕೆಲವು ಸ್ಪರ್ಧಿಗಳೂ ಅದಕ್ಕೆ ಬೆಂಬಲ ಸೂಚಿಸಿದ್ದಾರೆ. ಅದು ನಮ್ಮ ಹೋರಾಟಕ್ಕೆ ಪ್ರಥಮ ಹಂತದ ಬೆಂಬಲವಾಗಿದೆ. ಈ ವಿಷಯವನ್ನು ಮುಂದಿಟ್ಟು ಗಾಂಧೀಜಿಯವರ ಸ್ವರಾಜ್ಯದ ಆಶಯದ ಆಧಾರ ಇಟ್ಟುಕೊಂಡು ಒಂದು ರಾಜಕೀಯ ರಹಿತ ಸಂಘಟನೆಯನ್ನು ದೆಹಲಿಯಿಂದ ಪ್ರಾರಂಭಿಸಬೇಕೆಂದಿzವೆ. ನಂತರ ಅದನ್ನು ರಾಜ್ಯಕ್ಕೆ ವಿಸ್ತರಿಸಬೇಕೆಂದಿzವೆ. ಅದಕ್ಕೆ ನಿಮ್ಮೆಲ್ಲರ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸುತ್ತಿzವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.