ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಉದ್ಘಾಟನೆ

ಅಳದಂಗಡಿ: ದೇಶದ ಬೆನ್ನೆಲುಬು ರೈತರಿಗೆ ಹೊಸ ಚೈತನ್ಯ ತುಂಬಿ, ಕೃಷಿಯಲ್ಲಿ ಹೊಸ ಅಧ್ಯಯನಕ್ಕೆ ಸಹಕಾರಿಯಾಗಿ ಎಂದು ಅಳದಂಗಡಿ ಗ್ರಾ. ಪಂ. ಅಧ್ಯಕ್ಷ ಸತೀಶ್ ಮಿತ್ತಮಾರ್ ಹೇಳಿದರು. ಅವರು ಅಳದಂಗಡಿ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಇದರ ಕಛೇರಿ ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿನಾಥ್, ಅಳದಂಗಡಿ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ ಶುಭಕೋರಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಶಿವಾನಂದ ಹೆಗ್ಡೆ, ವಿಶ್ವನಾಥ ಸಾಲಿಯಾನ್, ಶಶಿಧರ್ ಶೆಟ್ಟಿ, ಸಿಪ್ರಿಯನ್ ರೊಡ್ರಿಗಸ್ ಉಪಸ್ಥಿತರಿದ್ದರು. ನ್ಯಾಯವಾದಿ ಶಿವಕುಮಾರ್ ಎಸ್. ಎಂ ಸ್ವಾಗತಿಸಿ, ಆಶಾ ಸುಜೀತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಳದಂಗಡಿ ಸುತ್ತಲಿನ ಗ್ರಾಮಗಳಲ್ಲಿರುವ ರೈತರು ತಮ್ಮ ಸ್ವಾವಲಂಬಿ, ಲಾಭದಾಯಕ ಕೃಷಿ ಚಟುವಟಿಕೆಗಳಿಗಾಗಿ ಈ ಕಂಪನಿಯನ್ನು ಅವಲಂಬಿಸಿದರೆ ಉತ್ತಮ. ಇಂದು ರೈತ ದುಬಾರಿ ವೆಚ್ಚದ ಕೃಷಿಯಲ್ಲಿ ತೊಡಗಿಕೊಂಡರೂ ನಷ್ಟದ ಅಪಾಯವನ್ನು ಎದುರಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಈ ಕಂಪನಿ ರೈತರ ಪಾಲಿಗೆ ಸಂಜೀವಿನಿಯಂತೆ ಕಾರ್ಯಾರಂಭಿಸಿದೆ.
ಸತೀಶ್ ಮಿತ್ತಮಾರು, ಅಧ್ಯಕ್ಷರು ಗ್ರಾ.ಪಂ ಅಳದಂಗಡಿ.

ಕೃಷಿ ತಜ್ಞ ಸ್ವಾಮಿನಾಥನ್ ಅವರ ಆಶಯಗಳನ್ನು ಮುಂದಿಟ್ಟುಕೊಂಡು ರೈತ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಕಂಪನಿ ಕಾರ್ಯಕ್ರಮ ರೂಪಿಸಲಿದೆ. ಹೊಸ ಕೃಷಿ ಆವಿಷ್ಕಾರಗಳನ್ನು ಅಳವಡಿಸಿಕೊಂಡರೆ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಿದೆ. ಈ ವರ್ಷ ರಾಜ್ಯದಲ್ಲಿ ಕೇವಲ ಎರಡು ಕಂಪನಿಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಅದರಲ್ಲಿ ಒಂದು ನಮ್ಮದು. ಮುಂದಕ್ಕೆ ರೈತರಿಗೆ ಮೈಲ್‌ತುತ್ತು, ಸಾವಯವ ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ಪೂರೈಕೆ ಮಾಡುವ ಉದ್ಧೇಶ ಹೊಂದಿದ್ದೇವೆ.
ಹರಿದಾಸ್ ಎಸ್.ಎಂ.
ಅಧ್ಯಕ್ಷರು: ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.