ಏ. 27:ಬೀಟ್‌ರಾಕರ್‍ಸ್ ಡ್ಯಾನ್ಸ್ ಅಕಾಡಮಿಯಿಂದ ಮಲ್ಟಿ ಸೆಲೆಬ್ರೆಟಿ ಶೋ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೀಟ್‌ರಾಕರ್‍ಸ್ ಡ್ಯಾನ್ಸ್ ಅಕಾಡಮಿ ಬೆಳ್ತಂಗಡಿ ಇದರ ವತಿಯಿಂದ ಏ. 27 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಡ್ಯಾನ್ಸ್ ಫ್ಲೇಮ್- ಸೀಸನ್ 8 ಸೆಲೆಬ್ರೆಟ್ ಶೋ..ಕಾರ್ಯಕ್ರಮ ವೈವಿದ್ಯಮಯವಾಗಿ ನಡೆಯಲಿದೆ. ಇದೇ ಮೊದಲ ಬಾರಿಗೆ ಆಮಂತ್ರಣ ಪರಿವಾರದ ಸಹಕಾರದೊಂದಿಗೆ ಕರಾವಳಿ ಸ್ವರ ಸಂಗಮ ಸಿಂಗಿಂಗ್ ಸ್ಪರ್ಧೆ ನಡೆಯಲಿದ್ದು ಈಗಾಗಲೇ ಆಡಿಶನ್‌ನಲ್ಲಿ 14 ಮಂದಿ ಜಿಲ್ಲೆಯ ಹಾಡುಗಾರರು ಆಯ್ಕೆಯಾಗಿದ್ದಾರೆ. ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಮಿಸ್ ಕರಾವಳಿ ಪೆಟ್ಟಿ ಮೋಡೆಲ್ಸ್ ರನ್‌ವೇ ಫ್ಯಾಶನ್ ಶೋ, ಕರಾಟೆ ಶೋ ಕೂಡ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ, ನೃತ್ಯ ಗುರು ಜಿತೇಶ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ತಾರಾಮೆರುಗು ನೀಡಲು “ಮಲ್‌ಗುಡಿ ಡೇಸ್” ಕನ್ನಡ ಚಲನಚಿತ್ರ ಖ್ಯಾತ ನಟಿ ಗ್ರೀಶ್ಮಾ ಶಶಿಧರ್, ಮಿಸ್ಟರ್ ಇಂಡಿಯಾ ಮಲ್ಟಿ ಮೀಡಿಯಾ ಮೋಡೆಲ್ ಮತ್ತು ಆಕ್ಟರ್ ನಾಗೇಶ್ ಡಿ.ಸಿ, ಧೀಜೋಡಿ ತೆಲುಗು ಟಿವಿ ಖ್ಯಾತ ನೃತ್ಯಗಾರ ಶಶಾಂಕ್, ಕನ್ನಡ ಗಾನಕೋಗಿಲೆ ಬಿರುದಾಂಕಿತ ಅಖಿಲಾ ಪಜಿಮಣ್ಣು, ಝೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸೆಲೆಬ್ರೆಟಿ ಡ್ಯಾನ್ಸರ್ ಅನ್ವಿಷಾ ವಾಮಂಜೂರು, ಡ್ರಾಮಾ ಜೂನಿಯರ್ ರನ್ನರ್‌ಆಪ್ ಶೃಷ್ಟಿ ಆರ್ ಶೆಟ್ಟಿ, ಸುವರ್ಣ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಕಿರಣ್ ಮೊದಲಾದವರು ವಿಶೇಷ ಆಹ್ವಾನಿತರಾಗಿದ್ದು ತಮ್ಮ ಕೌಶಲ್ಯ ಪ್ರದರ್ಶನ ನಡೆಸಲಿದ್ದಾರೆ. ಅಲ್ಲದೆ ಈಗಾಗಲೇ ಡ್ಯಾನ್ಸ್ ಅಕಾಡಮಿಯಲ್ಲಿ ಅಭ್ಯಾಸ ನಿರತರಾಗಿರುವ ೮೦ ರಷ್ಟು ವಿದ್ಯಾರ್ಥಿಗಳಿಂದ ಡ್ಯಾನ್ಸ್, ಮಕ್ಕಳ ಹೆತ್ತವರಿಂದ ವಿಶೇಷ ಡ್ಯಾನ್ಸ್ ಪ್ರದರ್ಶನ, ಉಚಿತವಾಗಿ ತರಬೇತಿ ಅವಕಾಶ ಪಡೆದಿರುವ ಮಾದರಿ ಶಾಲೆಯ ವಿದ್ಯಾರ್ಥಿಗಳಿಂದಲೂ ನೃತ್ಯಪ್ರದರ್ಶನ, ಮಿಸ್ಟರ್ ಫ್ಯಾಂಟಸಿ ಬೋಡಿ ಶೋ ಮತ್ತು ಕರಾಟೆ ಶೋ ಕೂಡ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಈ ವರ್ಷದ ಕಾರ್ಯಕ್ರಮ ಸಮಿತಿ ಅಧ್ಯಕ್ಷೆ ಲಲಿತಾ ಕೆ.ಎ ಕುಲಾಲ್, ಕಾರ್ಯದರ್ಶಿ ಲತಾ ಸತೀಶ್, ಕೋಶಾಧಿಕಾರಿ ರಾಧಿಕಾ ವಸಂತ್, ಪೇರೆಂಟ್ ದಿನೇಶ್‌ಬಾಬು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.