ಅಂಚೆ ಮತಯಂತ್ರದ ಟ್ರಂಕ್ ಹೊತ್ತ ತಹಶಿಲ್ದಾರ್……..

ಬೆಳ್ತಂಗಡಿ: ಈ ಬಾರಿಯ ಲೋಕಸಭಾ ಚುನಾವಣೆ ಸುಸೂತ್ರತೆಗಾಗಿ ಹಗಲಿರುಳು ದುಡಿದಿದ್ದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ವೇಳೆ ಅಂಚೆ ಮತಪತ್ರ ಮತ್ತು ಮತಯಂತ್ರಗಳು ತುಂಬಿದ ಟ್ರಂಕ್‌ಗಳನ್ನು ಸ್ವತಃ ಅವರೇ ತಲೆಮೇರೆ ಹೊತ್ತುಕೊಂಡು ಕೆಲಸ ನಿರ್ವಹಿಸಿದ ಫೋಟೋ ಈ ವಾರ ಭಾರೀ ಸುದ್ದಿಯಾಗಿದೆ.
ಮಾಜಿ ಸೈನಿಕರೂ ಆಗಿರುವ ಅವರು ನಿವೃತಿಯ ಬಳಿಕ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಶಿಲ್ದಾರ್ ಆಗಿ ನೇಮಕಗೊಂಡವರಾಗಿದ್ದಾರೆ. ತಾನೊಬ್ಬ ತಹಶಿಲ್ದಾರ್ ಮತ್ತು ತಾಲೂಕು ದಂಡಾಧಿಕಾರಿ ಎಂಬ ಹಮ್ಮುಬಿಮ್ಮಿಲ್ಲದೆ ಬೆಡ್‌ಶೀಟ್‌ವೊಂದನ್ನು ತಲೆಗೆ ಇರಿಸಿಕೊಂಡು ಟ್ರಂಕ್‌ಗಳನ್ನು ಹೊತ್ತು ಉಜಿರೆ ಮತ್ತು ಮಂಗಳೂರು ಸುರತ್ಕಲ್ ಎಣಿಕೆ ಕೆಂದ್ರದ ಬಳಿಕ ಸ್ಟ್ರಾಂಗ್ ರೂಮ್ ಕೊಠಡಿಯ ಬಳಿ ಲೋಡ್ ಮತ್ತು ಅನ್‌ಲೋಡ್ ಕೆಲಸ ಮಾಡಿದರು.
ಇದಕ್ಕೂ ಮುನ್ನ ಸುಮಾರು 60 ರಷ್ಟ್ರು ಇರುವ ಈ ಟ್ರಂಕ್‌ಗಳನ್ನು ತಾಲೂಕು ಕಚೇರಿ ಮತ್ತು ಚುನಾವಣೆ ನಿಯೋಜಿತ ಸಿಬ್ಬಂದಿಗಳು ಒಂದು ಬಾಕ್ಸ್‌ಗೆ 4 ಮಂದಿ ಕೈಕೊಟ್ಟು ಹೆಣಗಾಡುತ್ತಿದ್ದುದನ್ನು ಗಮನಿಸಿದ ತಹಶಿಲ್ದಾರರು, ಇದಕ್ಕಿಂತ ಒಬ್ಬೊಬ್ಬರೇ ಹೊತ್ತುಕೊಂಡು ಹೋದರೆ ಕೆಲಸ ಶೀಘ್ರ ಮತ್ತು ಸುಗಮವಾಗಲಿದೆ ಎಂದು ಸಲಹೆ ನೀಡಿದ್ದೂ ಮಾತ್ರವಲ್ಲದೆ ಸ್ವತಃ ತಾನೇ ಮೊದಲ ಪೆಟ್ಟಿಗೆ ತಲೆಮೇರೆ ಹೇರಿಕೊಂಡು ಕೆಲಸ ನಿರ್ವಹಿಸಿದರು.
ಸೈನ್ಯದಿಂದ ನಿವೃತರಾದ ಬಳಿಕ ಅವರು 5 ವರ್ಷಕ್ಕೂ ಮಿಕ್ಕಿ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಅವರು ತಹಶಿಲ್ದಾರ್ ಆಗಿದ್ದರು ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.