ಮುಂಡಾಜೆ: ಕಾಜೂರು ತಂಙಳ್ ಅನುಸ್ಮರಣೆ

ಮುಂಡಾಜೆ: ಇಲ್ಲಿನ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್, ಮಸ್ಲ್‌ಕ್ ಮುಂಡಾಜೆ, ಎಸ್‌ವೈಎಸ್ ಮತ್ತು ಸುನ್ನೀ ಸಂಘಟನೆಗಳ ಸಹಕಾರದೊಂದಿಗೆ ಏ. 21ರಂದು ಮರ್‌ಹೂಮ್ ಜಮಲುಲ್ಲೈಲಿ ತಂಙಳ್ ಕಾಜೂರು ಅನುಸ್ಮರಣೆ ಕಾರ್ಯಕ್ರಮ ನಡೆಯಿತು. ಸಯ್ಯಿದ್ ಕೆ.ಪಿಎ.ಎಸ್ ಜಮಲುಲ್ಲೈಲಿ ತಂಙಳ್ ನೇತೃತ್ವ ವಹಿಸಿದ್ದರು.
ಅಧ್ಯಕ್ಷತೆಯನ್ನು ಎಸ್‌ವೈಎಸ್ ಅಧ್ಯಕ್ಷ ಹಮೀದ್ ನೆಕ್ಕರೆ ವಹಿಸಿದ್ದರು.  ದಿನದ ಮಹತ್ವದ ಬಗ್ಗೆ ಹಮೀದ್ ಫೈಝಿ ಕಿಲ್ಲೂರು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಎಸ್‌ವೈಎಸ್ ಉಜಿರೆ ಸೆಂಟರ್ ಅಧ್ಯಕ್ಷ ಇಬ್ರಾಹಿಂ ಕಕ್ಕಿಂಜೆ, ಮುಖಂಡರಾದ ಹಾಜಬ್ಬ, ಇಬ್ರಾಹಿಂ ದರ್ಖಾಸು, ಎಸ್ ಅಬ್ದುಲ್ಲ, ಮುಹಮ್ಮದ್ ಜೈ ಭಾರತ್, ರಮ್ಲ ನೆಕ್ಕರೆ, ಶಬೀರ್ ಬಿ.ಕೆ.ಹೆಚ್, ಹಾಗೂ ಸಮಿತಿ ಪದಾಧಿಕಾರಿಗಳು ಸಹಕಾರ ನೀಡಿದರು.  ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.