ಪ್ರೊ ಮಾದರಿಯ ಕೋಟಿ ಚೆನ್ನಯ ಪ್ರೀಮಿಯರ್ ಲೀಗ್ ಕಬ್ಬಡಿ ಹರಾಜು ಪ್ರಕ್ರಿಯೆ

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ ಇದರ ಆಶ್ರಯದಲ್ಲಿ ಯುವ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಮಹಿಳಾ ಬಿಲ್ಲವ ವೇದಿಕೆ ಸಹಕಾರದಲ್ಲಿ ಮೇ.5 ರಂದು ನಡೆಯಲಿರುವ ಹೊನಲು ಬೆಳಕಿನ ಪ್ರೊ ಮಾದರಿಯ ಕೋಟಿ ಚೆನ್ನಯ ಪ್ರೀಮಿಯರ್ ಲೀಗ್ ಕಬ್ಬಡಿ ತಂಡಗಳ ಹರಾಜು ಪ್ರಕ್ರಿಯೆ ಏ.20 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
8 ತಂಡಗಳ ಮಾಲಕರು ಮತ್ತು ಕಪ್ತಾನ, ಕೋಚ್ ಹಾಗೂ ಆಟಗಾರರು ಭಾಗವಹಿಸಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ರಾಷ್ಟ್ರ- ರಾಜ್ಯ ಮತ್ತು ವಿವಿಧ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ದ.ಕ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳ ಪ್ರತಿಭಾನ್ವಿತ ಬಿಲ್ಲವ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ನಿರ್ದೇಶಕರುಗಳಾದ ಅಭಿನಂದನ್ ಹರೀಶ್ ಕುಮಾರ್, ನಿತ್ಯಾನಂದ ನಾವರ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಸಂಘಟನಾ ಕಾರ್ಯದರ್ಶಿ ಸಚಿನ್ ಕುಮಾರ್ ನೂಜೋಡಿ, ಕೋಟಿ ಚೆನ್ನಯ ಕ್ರೀಡಾ ಸಮಿತಿಯ ಸಂಚಾಲಕ ಜಯವಿಕ್ರಮ, ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.