ಎ.29: ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಅಶ್ವತ್ಥ ಉಪನಯನ, ವಿವಾಹ ಸಮಾರಂಭ

ಉಜಿರೆ: ಇಲ್ಲಿಯ ಓಡಲ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಎ.29ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಹಭಾಗಿತ್ವದಲ್ಲಿ ಹಾಗೂ ಪ್ರಧಾನ ಅರ್ಚಕ ವೇದಮೂರ್ತಿ ಪಿ.ರಾಜಗೋಪಾಲ ಯಡಪಡಿತ್ತಾಯ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಅಶ್ವತ್ಥ ಮರ ಉಪನಯನ, ವಿವಾಹ ಸಮಾರಂಭs ಜರುಗಲಿದೆ.
ಎ.28 ರಂದು ಸಂಜೆ ಪಂಚಗವ್ಯ-ಪುಣ್ಯಾಹ, ಸ್ಥಳ ಶುದ್ದಿ, ರಾಕ್ಷೋಘ್ನ-ವಾಸ್ತುಹೋಮ, ಕಲಶ, ವಾಸ್ತುಬಲಿ ನಡೆಯಲಿದೆ. ಎ.29 ರಂದು ಬೆಳಿಗ್ಗೆ ಅಶ್ವತ್ಥ ಕಟ್ಟೆಯಲ್ಲಿ ಪಂಚಗವ್ಯ, ಪುಣ್ಯಾಹ, ಕಲಶಪ್ರತಿಷ್ಠೆ ಗಣಪತಿಹೋಮ, ಉಪನಯನ, ಮದುವೆ , ಪರ್ವ ನಡೆದು ನಂತರ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಮಹಾಪೂಜೆ ಪ್ರಸಾದ ವಿತರಣೆ ನಡೆದು, ಭಂಡಾರ ತೆಗೆದು ದೈವಕ್ಕ ಎಣ್ಣೆ ಬೂಳ್ಯ ನಡೆದು, ಶ್ರೀ ವ್ಯಾಘ್ರಚಾಮುಂಡಿ ನೇಮೋತ್ಸವ ಜರುಗಲಿರುವುದು. ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜರುಗಿ ಉಜಿರೆ ಸಂಗಮ ಕಲಾವಿದರಿಂದ ಪಿರಬನ್ನಗ ತುಳು ಹಾಸ್ಯಮಯ ನಾಟಕ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.