ಉಜಿರೆ ಹಳೆಪೇಟೆ ಬಳಿ ಎರಡು ಬೈಕ್‌ಗಳು ಪರಸ್ಪರ ಡಿಕ್ಕಿ: ಓರ್ವನಿಗೆ ಗಂಭೀರ ಗಾಯ

ಉಜಿರೆ: ಇಲ್ಲಿಯ ಹಳೆಪೇಟೆ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು(ಎ .22) ಬೆಳಿಗ್ಗೆ ನಡೆದಿದೆ.
ಉಜಿರೆ ಅತ್ತಾಜೆ ನಿವಾಸಿ, ರಬ್ಬರ್ ಟ್ಯಾಪರ್ ಉಮೇಶ ಅವರ ಮುಖ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು, ಇನ್ನೋರ್ವ ಬೈಕ್ ಸವಾರ ಕಾಶಿಬೆಟ್ಟು ಮಾರ್ಬಲ್ ವ್ಯಾಪಾರ ಮಳಿಗೆಗೆ ಸೇರಿದ ವ್ಯಕ್ತಿ ಅಲ್ಪಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಅಪೇ ರಿಕ್ಷಾ ಚಾಲಕ ಉಸ್ಮಾನ್ ಕುಂಟಿನಿ ಹಾಗೂ ಸ್ಥಳೀಯರ ಸಹಾಯದಿಂದ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಮಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.