HomePage_Banner_
HomePage_Banner_

ಕಳಿಯ: ಮೇರ್ಲಗುತ್ತುವಿನಲ್ಲಿ ದೈವ ಪ್ರತಿಷ್ಠೆ ಹಾಗೂ ಅರ್ಚಕರಿಗೆ ಸನ್ಮಾನ

ಕಳಿಯ: ಇಲ್ಲಿಯ  ಮೇರ್ಲಗುತ್ತು ಬೊಮ್ಮಣ್ಣ ಪೂಜಾರಿ ಮನೆಯಲ್ಲಿ ಸಪರಿವಾರ ಮೈಸಂದಾಯ, ದುಗ್ಗಲಾಯ ಪಟ್ಟದ ಪಂಜುರ್ಲಿ ದೈವದ ಪ್ರತಿಷ್ಠೆ ಕಾರ್ಯಕ್ರಮವು ಕುಂಟಿನಿ ರಾಘವೇಂದ್ರ ಭಾಂಗಿಣ್ಣಯರ ಪೌರೋಹಿತ್ಯದಲ್ಲಿ ವಿಧಿವತ್ತಾಗಿ  ಮೇರ್ಲ ಮನೆಯಲ್ಲಿ ಎ.18 ರಂದು ನೆರವೇರಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಆರ್ಚಕ ಮತ್ತು ಕಳಿಯ ಗ್ರಾಮದ ಪುಣಿಕ್ಕಲ್ ಕುಕ್ಕು ಶನೀಶ್ವರ ಪೂಜಾ ಸಮಿತಿ ಅಧ್ಯಕ್ಷರಾದ ವೇ.ಮೂ.ಕುಂಟಿನಿ ರಾಘವೇಂದ್ರ ಭಾಂಗಿಣ್ಣಯ ರವರನ್ನು ಮೇರ್ಲಗುತ್ತು ಬೋಮ್ಮಣ್ಣ ಪೂಜಾರಿ ಮತ್ತು ಕುಟುಂಬದವರ ನೇತೃತ್ವದಲ್ಲಿ ಕಳಿಯ ಬೀಡು ಗುತ್ತುಮನೆಯ ಸುರೇಂದ್ರ ಜೈನ್ ರವರು ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ಸಂಬಂಧಿಕರು,ಭಕ್ತಾಧಿಗಳು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.