ಮೇಲಂತಬೆಟ್ಟು ಶ್ರೀದೇವಿ ಭಗವತಿ ಅಮ್ಮನವರ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ-ಅಗ್ನಿಗುಳಿಗ ದೈವದ ಕೋಲ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನದಲ್ಲಿ 10 ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ಅಗ್ನಿಗುಳಿಗ ದೈವಕ್ಕೆ ಸಿರಿ ಸಿಂಗಾರದ ಕೋಲ ಎ.17 ರಂದು ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಶ್ರೀ ದೇವಿ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮಗಳು ಬ್ರಹ್ಮಶ್ರೀ ನಡ್ವಂತಾಡಿ ವೇದಮೂರ್ತಿ ಶ್ರೀಪಾದ ತಂತ್ರಿ ಇವರ ವೈದಿಕ ನೇತೃತ್ವದಲ್ಲಿ ಜರುಗಿತು. ಬೆಳಿಗ್ಗೆ 7.30  ರಿಂದ ಆಚಾರ್ಯವರಣ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ಕಲಶ ಪೂಜೆ, ನವಕ ಕಲಶಾಭಿಷೇಕ, ದೇವಿಗೆ ಪಂಚಾಮೃತ ಅಭಿಷೇಕ ನಡೆಯಿತು.
ಬೆಳಿಗ್ಗೆ 9 ರಿಂದ ಗುರು ಪೂಜೆ, 10  ರಿಂದ ಶ್ರೀ ದುರ್ಗಾ ಹೋಮ ಪ್ರಾರಂಭ, ಗಂಟೆ 11  ರಿಂದ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12  ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಗಂಟೆ 12.30  ಕ್ಕೆ ಶ್ರೀ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಸಂಜೆ ಗಂಟೆ 5.30  ರಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ, ಮೇಲಂತಬೆಟ್ಟು ಹಾಗೂ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಗಂಟೆ 7  ಕ್ಕೆ ಶ್ರೀ ದೇವಿಗೆ ಮಹಾ ರಂಗಪೂಜೆ, ಮಹಾಪೂಜೆ ಜರುಗಿತು. ರಾತ್ರಿ ಗಂಟೆ 9  ರಿಂದ ಅಗ್ನಿಗುಳಿಗ ದೈವಕ್ಕೆ ಸಿರಿ ಸಿಂಗಾರದ ಕೋಲ ವೈಭವಪೂರ್ಣವಾಗಿ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಹಾಗೂ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆದರು.
ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಪ್ರಧಾನ ಅರ್ಚಕ ಯಶವಂತ ಶಾಂತಿ, ಅರ್ಚಕ ವೃಂದ, ಪೂಜಾ ಸಮಿತಿ, ಭಜನಾ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮೇಲಂತಬೆಟ್ಟು ಹಾಗೂ ಭಕ್ತಾದಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.