ಎ.22 : ಗುರುವಾಯನಕೆರೆಯಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ವಸತಿ ಗೃಹ ಫನಾತೀರ್ ಮಾಲ್ ಉದ್ಘಾಟನೆ

ಗುರುವಾಯನಕೆರೆ: ಇಲ್ಲಿನ ಮುಖ್ಯ ರಸ್ತೆಯ ಬಳಿ ನೂತನವಾಗಿ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣ ಮತ್ತು ವಸತಿಗೃಹ   ಫನಾತೀರ್ ಮಾಲ್”    ಕಟ್ಟಡ  ಎ.22  ರಂದು ಉದ್ಘಾಟನೆಗೊಳ್ಳಲಿದೆ.
39  ವಾಣಿಜ್ಯ ಮಳಿಗೆಗಳು, 20  ಡೀಲಕ್ಸ್ ಏಂಡ್ ಮಲ್ಟಿ ಡೀಲಕ್ಸ್ -ಶೂಟ್ ರೂಮ್‌ಗಳನ್ನೊಳಗೊಂಡಿರುವ ವಸತಿ ಗೃಹದ ಕಾಮಗಾರಿ ಸಂಪೂರ್ಣಗೊಂಡಿರುತ್ತದೆ.
ವಿಶಾಲವಾದ ಪಾರ್ಕಿಂಗ್, ದಿನದ ಪೂರ್ಣ ವಿದ್ಯುತ್, ನೀರು -ಬಿಸಿನೀರು ಸೌಲಭ್ಯ, ಸಿಸಿ ಕೇಮರಾ ಕಣ್ಗಾವಲು, ಎಸಿ ಮತ್ತು ಎಸಿ ರಹಿತ ಲಾಡ್ಜಿಂಗ್ ಕೊಠಡಿಗಳು, ಈಗಾಗಲೇ ಮಳಿಗೆಯಲ್ಲಿ ವೆಜ್‌ರೆಸ್ಟೋರೆಂಟ್, ಲೇಡಿಸ್- ಜೆಂಟ್ಸ್ ಡ್ರೆಸ್ ಶೋರೂಮ್, ಬ್ಯೂಟಿ ಪಾರ್ಲರ್, ಫ್ಯಾನ್ಸಿ ಏಂಡ್ ಗಿಫ್ಟ್ ಸೆಂಟರ್, ಇತ್ಯಾಧಿ ತೆರೆದುಕೊಳ್ಳಲಿದೆ.
ಮುಂದಕ್ಕೆ ಮೆಡಿಕಲ್ ಸ್ಟೋರ್,ಕ್ಲಿನಿಕ್, ಲೇಬೊರೇಟರಿ, ಬ್ಯಾಂಕ್, ಪೋಸ್ಟ್ ಆಫೀಸ್, ಮಲ್ಟಿ ಜಿಮ್, ಮಲ್ಟಿ ಟ್ರೈನಿಂಗ್ ಸೆಂಟರ್, ಎಟಿಎಂ ಇತ್ಯಾಧಿ ತೆರೆಯಲು ಅವಕಾಶ ಇದೆ ಎಂದು ಕಟ್ಟಡದ ಮಾಲಿಕರಾದ ರಶೀದ್, ಅಬ್ಬಾಸ್ ಗುರುವಾಯನಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ದುಆ ಪ್ರಾರ್ಥನೆಯಲ್ಲಿ ಹೆಚ್. ಎಂ ಅಬ್ದುಲ್ ಕರೀಂ ಸಅದಿ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಸಹಿತ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಲಸಿದ್ದಾರೆ ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.