ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಧಾರೆ ಸೀರೆ ವಿತರಣೆ ಹಾಗೂ ದಾನಿಗಳಿಗೆ ಗೌರವಾರ್ಪಣೆ

ಗುರುವಾಯನಕೆರೆ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ವತಿಯಿಂದ ಧಾರೆ ಸೀರೆ ವಿತರಣೆ ಹಾಗೂ ದಾನಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಎ.16 ರಂದು ಗುರುವಾಯನಕೆರೆ ಬಂಟರಭವನದ ಆಶಾಪ್ರಕಾಶ ಶೆಟ್ಟಿ ಸಭಾಂಗಣದಲ್ಲಿ ಜರುಗಿತು.


ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ| ಯಂ.ಮೋಹನ ಆಳ್ವ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಬಂಟರ ಯಾನೆ ನಾಡವರ ಸಂಘ ಹೊರತರುತ್ತಿರುವ ‘ಬಂಟರ ಮದಿಪು ‘ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕೆ.ವಿಠಲ ಶೆಟ್ಟಿ, ಕೋಶಾಧಿಕಾರಿ ಟಿ.ಕೃಷ್ಣ ರೈ, ಜತೆಕಾರ್ಯದರ್ಶಿ ವಸಂತ ಶೆಟ್ಟಿ, ಟಿ.ಆರ್.ಅಡ್ಯಂತಾಯ, ಸ್ಮರಣ ಸಂಚಿಕೆ ಗೌರವ ಸಂಪಾದಕ ಡಾ| ಬಿ.ಎ ಕುಮಾರ್ ಹೆಗ್ಡೆ, ಬಂಟರ ಯುವ ವಿಭಾಗದ ಅಧ್ಯಕ್ಷ ಪ್ರಸಾಸ್ ಶೆಟ್ಟಿ ಏಣಿಂಜೆ, ಮಹಿಳಾ ವಿಭಾಗದ ಅಧ್ಯಕ್ಷೆ ಪದ್ಮಲತಾ ಎನ್ ರೈ , ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.