ಏ. 21 ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ವತಿಯಿಂದ ಉಚಿತ ಬೃಹತ್ ವೈದ್ಯಕೀಯ-ದಂತ ತಪಾಸಣಾ ಶಿಬಿರ

ಬೆಳ್ತಂಗಡಿ: 4 ದಶಕಗಳ ಹಿಂದೆ ಉದಯ ಪೂಜಾರಿ ಬಳ್ಳಾಲ್‌ಬಾಗ್ ಅವರ ಆಶಯದಂತೆ ರೂಪುತಾಳಿರುವ ಬಿರುವೆರ್ ಕುಡ್ಲ ಘಟಕದ ಈಗಾಗಲೇ ಕೋಟಿ ರೂ. ಗಳಿಗೂ ಮಿಕ್ಕಿದ ಸೇವಾ ಚಟುವಟಿಕೆಗಳನ್ನು ಜಾತಿ ಧರ್ಮ ಮೀರಿ ನಡೆಸಿದ್ದು ಇದೀಗ ಇದರ ಬೆಳ್ತಂಗಡಿ ಘಟಕದ ವತಿಯಿಂದ ಏ. 21 ರಂದು ತಾಲೂಕಿನ ಸರ್ವಜನಾಂಗದವರಿಗೆ ಸಹಾಯವಾಗಲೆಂಬ ಇರಾದೆಯಿಂದ “ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ”  ಬೆಳ್ತಂಗಡಿ ನಗರದ ಮಾದರಿ ಹಿ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದೆ ಎಂದು ಸಮಿತಿ ತಾ. ಅಧ್ಯಕ್ಷ ರಾಜೇಶ್ ಕೋಟ್ಯಾನ್ ಮತ್ತು ಗೌರವ ಸಲಹೆಗಾರ ನಿತ್ಯಾನಂದ ನಾವರ ತಿಳಿಸಿದರು.

ನಗರದ ವಾರ್ತಾಭವನದಲ್ಲಿ ಏ.15 ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಶಿಬಿರದಲ್ಲಿ ಏನೇನಿದೆ:
ದಂತ ತಪಾಸಣೆ ಮತ್ತು ಚಿಕಿತ್ಸೆ, ನೇತ್ರ ವಿಭಾಗ, ಸಾಮಾನ್ಯ ವೈದ್ಯಕೀಯ ವಿಭಾಗ, ಸ್ತ್ರೀ ರೋಗ ವಿಭಾಗ, ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಇತ್ಯಾಧಿ ವಿಭಾಗದ ತಜ್ಞ ವೈದ್ಯರುಗಳು ಆಗಮಿಸಲಿದ್ದು ಈ ವಿಭಾಗಳಲ್ಲಿ ಉಚಿತವಾಗಿ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಅರುಣ್ ಪೂಜಾರಿ, ಕೋಶಾಧಿಕಾರಿ ಹರೀಶ್ ಕೋಟ್ಯಾನ್, ವಲಯ ಸಂಚಾಲಕರುಗಳಾದ ಸುರೇಂದ್ರ ಕೋಟ್ಯಾನ್ ಮತ್ತು ಆಶೋಕ್ ಲಾಯಿಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.