ಬೆಳ್ತಂಗಡಿ: ಸುದೆಮುಗೇರಿನಲ್ಲಿ ಜೋಡಿ ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1

ಪತ್ನಿಯ ಜೊತೆ  ಜಗಳವಾಡಿ ಇಷ್ಟಪಟ್ಟ ಅಪ್ರಾಪ್ತ ಯುವತಿ ಜೊತೆ ನೇಣಿಗೆ ಶರಣು

ಕಿರಣ್ ಶೆಟ್ಟಿ ಮತ್ತು ಲವೀನಾ ದಂಪತಿ                                        ನೇಣಿಗೆ ಶರಣಾದ ಸಂಗೀತಾ

ಬೆಳ್ತಂಗಡಿ  ಶವಾಗಾರದಲ್ಲಿ ಘಟನೆಯ ಮಾಹಿತಿ ಪಡೆಯುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ

ಬೆಳ್ತಂಗಡಿ: ಕ್ರೈಸ್ತ ಯುವತಿಯ ಜೊತೆ ಪ್ರೇಮ ವಿವಾಹವಾಗಿ ಬಳಿಕ ಇನ್ನೊಂದು ಹುಡುಗಿ ಜೊತೆ ಪ್ರೀತಿ ಹುಟ್ಟಿಕೊಂಡ ಕಾರಣಕ್ಕೆ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ವ್ಯಕ್ತಿ ಎರಡನೆಯವರನ್ನು ವಿವಾಹವಾಗಿ ಜೊತೆಗಿರುವಂತೆ ಇದೀಗ ಆಕೆಯ ಅತ್ತೆ ಮಗಳು, ಅಪ್ತಾಪ್ತ ಬಾಲಕಿ ಜೊತೆ ಇಷ್ಟಗೊಂಡು ಕಳೆದ ರಾತ್ರಿ ಮನೆಯಲ್ಲಿ ನಡೆದ ಘರ್ಷಣೆಯ ಬಳಿಕ ಅಪ್ರಾಪ್ತ ಯುವತಿ ಮತ್ತು ವಿವಾಹಿತ ವ್ಯಕ್ತಿ ಇಬ್ಬರೂ ನೇಣಿಗೆ ಶರಣಾದ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದ ಸುದೆಮುಗೇರು ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ನೇಣಿಗೆ ಶರಣಾದವರು ಲಾಯಿಲ ಪುತ್ರಬೈಲು ನಿವಾಸಿ, ಮೆಕ್ಯಾನಿಕಲ್ ವೃತ್ತಿ ನಿರತ ಕಿರಣ್ ಶೆಟ್ಟಿ (29ವ.) ಮತ್ತು ಅವರ ಪತ್ನಿಯ ಅತ್ತೆಯ ಮಗಳು, ಪುತ್ರಬೈಲು ನಿವಾಸಿನಿ ಸಂಗೀತಾ(15.ವ) ಎಂಬವರಾಗಿದ್ದಾರೆ.
ಕಿರಣ್ ಶೆಟ್ಟಿ ಅವರಿಗೆ ಹಿಂದೆ ಬಣಕಲ್‌ನ ಕ್ರೈಸ್ತ ಯವತಿಯ ಜೊತೆ ಅಂತರ್ಜಾತಿ ಪ್ರೇಮವಿವಾಹವಾಗಿತ್ತು. ಹಾಗಿರುವಂತೆಯೇ 4 ವರ್ಷಗಳಿಂದೀಚೆಗೆ ಕಲ್ಲೇರಿ ನಿವಾಸಿನಿ ಪರಿಶಿಷ್ಟ ಜಾತಿಯ ಲವೀನಾ ಎಂಬವರ ಜೊತೆ ಪ್ರೇಮಾಂಕುರವಾಗಿತ್ತು. ಈ ವಿಚಾರ ರಾದ್ದಾಂತಕ್ಕೆ ಕಾರಣವಾಗಿ ಮೊದಲ ಪತ್ನಿಗೆ ವಿಚ್ಛೇದನ ನೀಡಲಾಗಿ ಕಳೆದ 2 ತಿಂಗಳ ಹಿಂದೆ ಲವೀನಾ ಜೊತೆ ಕಿರಣ್ ವಿವಾಹವಾಗಿದ್ದರು. ಇದಾದ ಬಳಿಕ ಆಕೆಯ ಅತ್ತೆಯ ಮಗಳು, ಇನ್ನೂ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸಂಗೀತಾ ಜೊತೆ ಹೆಚ್ಚು ಬೆರೆಯಲು ಆರಂಭಿಸಿದ್ದರು. ಆಕೆ ಕೂಡ ಇದೇ ಮನೆಯಲ್ಲಿ ಇದ್ದು ಮೂವರೂ ಜೊತೆಯಾಗಿದ್ದರು, ಇದು ಆ ಮನೆಯ ನೆಮ್ಮದಿ ಕೆಡಿಸಿತ್ತು.

ಇದೇ ಕಾರಣಕ್ಕೆ ಪತಿ ಪತ್ನಿ ನಡುವೆ ಜಗಳ ನಡೆದದ್ದೂ ಇದೆ. ಈ ಮಧ್ಯೆ ಕಳೆದ ರಾತ್ರಿ ಬೆಳ್ತಂಗಡಿ ಸುದೆಮುಗೇರಿನ ಬಾಡಿಗೆ ಮನೆಯಲ್ಲಿ ಪತಿ -ಪತ್ನಿ ಮತ್ತು ಬಾಲಕಿ ಸಂಗೀತಾ ಕೂಡ ಜೊತೆಗೆಯೇ ಇದ್ದು ಇದೇ ಜಗಳ ತಾರಕಕ್ಕೇರಿತ್ತು. ಪರಸ್ಪರ ಹೊಡೆದಾಡಿಕೊಳ್ಳುವಲ್ಲಿವರೆಗೂ ಬೆಳೆದಿತ್ತು. ಇದರಿಂದಾಗಿ ಮನೆಯಲ್ಲಿ ನಡೆದ ಘಟನೆ ಬಗ್ಗೆ ತನ್ನ ತಾಯಿಗೆ ವಿಚಾರ ತಿಳಿಸಿದ ಪತ್ನಿ ಲವೀನಾ ನಡು ರಾತ್ರಿ ಲಾಯಿಲ ಪುತ್ರಬೈಲಿನ ಆಂಟಿ ಮನೆಗೆ ಹೋಗಿದ್ದರು. ಆ ಬಳಿಕ ಕಿರಣ್ ಶೆಟ್ಟಿ ಮತ್ತು ಸಂಗೀತಾ ಮಾತ್ರ ಮನೆಯಲ್ಲಿದ್ದು ನಿಗೂಢವಾಗಿ ನೇಣಿಗೆ ಶರಣಾಗಿದ್ದಾರೆ.

ಏ. 15 ರಂದು ಬೆಳಿಗ್ಗೆ ಪತ್ನಿ ಲವೀನಾ ತನ್ನ ಪತಿ ಮತ್ತು ಆಕೆ ಏನು ಮಾಡುತ್ತಾರೆ ಎಂದು ನೋಡಲು ಬಂದಿದ್ದ ವೇಳೆ ಮನೆಯ ಎರಡೂ ಕಡೆಯಿಂದ ಲೋಕ್ ಹಾಕಲಾಗಿತ್ತು. ಏಣಿ ತರಿಸಿ ನೋಡಿದಾಗ ಇಬ್ಬರೂ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ಮನೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪುಡಿಗಟ್ಟಲಾಗಿದ್ದು ಬಳಿಕ ಒಂದೇ ಶಾಲಿನಿಂದ ಇಬ್ಬರೂ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡಿದ್ದರು. ಈ ವೇಳೆ ಹುಳಹಿಡಿದಿದ್ದ ಪಕ್ಕಾಸು ಮತ್ತು ಹೆಂಚು ತುಂಡಾಗಿ ಕಿರಣ್ ಕೆಳಬಿದ್ದಿದ್ದರು. ಇದಾದ ಬಳಿಕ ಕಿರಣ್ ನೈಲಾನ್ ಹಗ್ಗದ ಮೂಲಕ ಅಲ್ಲೇ ಪಕ್ಕದ ಇನ್ನೊಂದು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕ‍ಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ, ಸಬ್ ಇನ್ಸ್ ಪೆಕ್ಟರ್ ರವಿ, ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ಭರತ್ ಕುಮಾರ್ ಹಾಗೂ ಸಿಬ್ಬಂದಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.