HomePage_Banner_
HomePage_Banner_
HomePage_Banner_

ಕಕ್ಕಿಂಜೆ:  ಯೋಗ ಪ್ರಕೃತಿ  ಚಿಕಿತ್ಸೆ ಮತ್ತು ಫಿಸಿಯೋಥೆರಪಿ ವಿಭಾಗ ಶುಭಾರಂಭ

ಕಕ್ಕಿಂಜೆ:  ಶ್ರೀ ಕೃಷ್ಣ  ಆಸ್ಪತ್ರೆ ಕಕ್ಕಿಂಜೆ ಇದರ ಯೋಗ ಪ್ರಕೃತಿ  ಚಿಕಿತ್ಸೆ ಮತ್ತು ಫಿಸಿಯೋಥೆರಪಿ ವಿಭಾಗ ಎ. 15ರಂದು ಶುಭಾರಂಭಗೊಂಡಿತು .  ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶಕುಂತಳ  ಇರ್ವತ್ರಾಯ  ದೀಪ ಪ್ರಜ್ವಲಿಸಿ  ಉದ್ಘಾಟನೆಯನ್ನು ನೆರವೇರಿಸಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮುರಳಿಕೄಷ್ಣ ಇರ್ವತ್ರಾಯ ಮಾತನಾಡಿ, ಯೋಗ ಪ್ರಕೃತಿ ಚಿಕಿತ್ಸೆಯು ಮನುಷ್ಯನನ್ನು ಆರೋಗ್ಯವಂತನಾಗಿಸಲು ಒಂದು ಬಹುಮುಖ್ಯ ಚಿಕಿತ್ಸಾ ವಿಧಾನವಾಗಿದೆ. ಭಾರತೀಯ ಪರಂಪರೆಯ ಈ ಚಿಕಿತ್ಸಾ ವಿಧಾನಕ್ಕೆ ಇಡಿ ವಿಶ್ವವೆ ಮೆಚ್ಚಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆ ಉಪಮುಖ್ಯ ವೈದ್ಯಾಧಿಕಾರಿ  ಡಾ. ವಂದನಾ ಎಂ ಇರ್ವತ್ರಾಯ, ವೈದ್ಯಾಧಿಕಾರಿಗಳಾದ ಡಾ.ಸುಬ್ರಹ್ಮಣ್ಯ  ಭಟ್, ಡಾ. ನಮೃತ ಆಳ್ವ, ಯೋಗ ಮತ್ತುಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ತೆಜಸ್ವಿನಿ ಎಸ್ ಆರ್, ಆಸ್ಪತ್ರೆಯ ಆಡಳಿತಾಧಿಕಾರಿ ವಿಷ್ಣು ಸ್ವರೂಪ್, ಜ್ಯೋತಿ ವಿ ಸ್ವರೂಪ್, ಸಿಬ್ಬಂದಿಗಳು ಮೊದಲಾದವರಿದ್ದರು.

ಯೋಗ ಪ್ರಕೃತಿ ಚಿಕಿತ್ಸೆ ಫಿಸಿಯೋಥೆರಪಿ ವಿಭಾಗದಲ್ಲಿ ಫಿಸಿಯೋಥೆರಪಿ , ಸೂಜಿ ಚಿಕಿತ್ಸೆ,ಯೋಗಥೆರಪಿ,ಪ್ರಾಣಾಯಾಮ,ಧ್ಯಾನ,ಆಹಾರ ಪದ್ದತಿ ಬಗ್ಗೆ ಕೌನ್ಸಲಿಂಗ್, ನೋವು ನಿವಾರಕ ಚಿಕಿತ್ಸೆ ಲಭ್ಯವಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.