ಮೋದಿಯಂತಹ ಬಲಿಷ್ಠ ನಾಯಕತ್ವ ಇರುವ ನಾಯಕ ನಮ್ಮ ದೇಶಕ್ಕೆ ಬೇಕಾಗಿದೆ: ಸುಬ್ರಹ್ಮಣ್ಯ ಅಗರ್ತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಡೀ ಜಗತ್ತಿನಲ್ಲಿ ಮೋದಿಯವರ ನಾಯಕತ್ವ ಅತ್ಯಂತ ಉನ್ನತ ಮಟ್ಟದಲ್ಲಿ ಇದೆ ಎಂದು ಇಡೀ ಜಗತ್ತೇ ಹೇಳುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯಂತಹ ಬಲಿಷ್ಠ ನಾಯಕತ್ವ ಇರುವ ನಾಯಕ ನಮ್ಮ ದೇಶಕ್ಕೆ ಬೇಕಾಗಿದೆ. ದೇಶ ಮೊದಲು, ಆಮೇಲೆ ನಾವೆಲ್ಲಾ ಎಂದು ತಾಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಅಗರ್ತ ತಿಳಿಸಿದರು.
ಅವರು ಎ.12 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜಕೀಯ ವ್ಯವಸ್ಥೆ ಅವನತಿಗೆ ಬಂದಿದ್ದು, ಈ ಐದು ವರ್ಷದಲ್ಲಿ ಅದನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದಾರೆ. ಮತದಾರ ಬಂಧುಗಳು ಎ.18 ರಂದು ನಡೆಯುವ ಚುನಾವಣೆಯಲ್ಲಿ ಸಂವಿಧಾನ ಉಳಿಸಿಕೊಳ್ಳುವಂತಹವರಿಗೆ ಮತದಾನ ಮಾಡಿ ಬೆಂಬಲ ಕೊಡಬೇಕಾಗಿ ಪರಿವಾರ ಸಂಘಟನೆಗಳು ಜನರಲ್ಲಿ ಕಳಕಳಿಯ ವಿನಂತಿಯನ್ನು ಮಾಡುತ್ತದೆ ಎಂದರು.
ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ರಘು ಸಕಲೇಶಪುರ ಮತ್ತು ಸಕಲೆಶಪುರ ತಾಲೂಕು ಸಂಯೋಜಕ ಧರ್ಮೇಶ್ ಇವರುಗಳನ್ನು ಒಬ್ಬ ಸಮಾಜ ದ್ರೋಹ, ರೌಡಿ ಎಂದು ಬಿಂಬಿಸಿ, ಗಡಿಪಾರು ಮಾಡಿರುವುದನ್ನು ಖಂಡಿಸುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ಒಬ್ಬ ದೇಶಕ್ಕೋಸ್ಕರ ಕೆಲಸ ಮಾಡಬೇಕಾಗಿದ್ದ ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ಭಾರತೀಯನ ಮೂಲಭೂತ ಹಕ್ಕಿಗೂ ಈ ಇಲಾಖಾ ಆಜ್ಞೆ ಅಡ್ಡಿ ಆಗಿರುತ್ತದೆ. ರಾಷ್ಟ್ರಕಾರ್ಯ, ಹಿಂದುತ್ವದ ಕಾರ್ಯ ಈ ರಾಜ್ಯದಲ್ಲಿ ರಾಷ್ಟ್ರದ್ರೋಹವೇ. ಈ ಆಜ್ಞೆಯನ್ನು ಹಿಂದಕ್ಕೆ ಪಡೆಯಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ, ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಡ ತಂದಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳದ ಭಾಸ್ಕರ ಧರ್ಮಸ್ಥಳ, ಸಂತೋಷ ಅತ್ತಾಜೆ, ತಾಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಮೋಹನ ಬೆಳ್ತಂಗಡಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.