HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಟ್ಟದಬೈಲು ಶಾಲೆಯಲ್ಲಿ ಯೋಗ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ

ಓಡಿಲ್ನಾಳ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟದಬೈಲು ಇದರ ವಜ್ರಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಶಾಲಾ ಹಳೆ ವಿದ್ಯಾರ್ಥಿಗಳಿಗೆ ಯೋಗ ಗುರುಗಳಾದ ಮೋಹನ ಆಚಾರ್ಯ ಇವರ ಮಾರ್ಗದರ್ಶನದಲ್ಲಿ 7 ದಿನಗಳ ಯೋಗ ಮತ್ತು ವ್ಯಕ್ತಿತ್ವ ವಿಕಾಸನ ಶಿಬಿರ  ಕಾರ್ಯಕ್ರಮವು ಎ.10 ರಂದು ಉದ್ಘಾಟನೆಗೊಂಡಿತು.

ಶಿಬಿರವನ್ನು ಹಳೆಕೋಟೆ ಭಗವಾನ್ ಶಿರ್ಡಿ  ಸತ್ಯಸಾಯಿ ಸೇವಾ ಕ್ಷೇತ್ರದ  ಅಧ್ಯಕ್ಷ ಎಚ್.ಪ್ರಭಾಕರ್   ದೀಪ ಬೆಳಗಿಸಿ ಉದ್ಘಾಟಿಸಿ, ಯೋಗದ ಮಹತ್ವದ  ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಎಲ್.ಐ.ಸಿ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಸಲಹೆಗಾರರಾದ ಲತಾ ಪ್ರಭಾಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಂತರಿಕ ಲೆಕ್ಕ ಪರಿಶೋಧಕಿ ಸುಗುಣ ಸುರೇಶ್‌ಆಳ್ವ ಹಾಗೂ ಗುರುವಾಯನಕೆರೆ ಸಿ.ಆರ್.ಪಿ. ರಾಜೇಶ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಅಧ್ಯಕ್ಷ ವಸಂತ ಶೆಟ್ಟಿ ಮಠ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರಭಾಕರ್ ಶಾಂತಿಕೋಡಿ ಸ್ವಾಗತಿಸಿ, ಮುಖ್ಯ ಶಿಕ್ಷಕ ಎಡ್ವರ್ಡ್ ಡಿ’ಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಭಾಗೀರಥಿ ಕಾರ್ಯಕ್ರಮ ನಿರೂಪಿಸಿ, ,ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶೇಖರ ಪೆಜತ್ತಕಾಡು ಧನ್ಯವಾದವಿತ್ತರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು,  ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.