ಆಡಳಿತ ಡೆಲ್ಲಿಯಿಂದ ಹಳ್ಳಿಗೆ ಅಲ್ಲ, ಹಳ್ಳಿಯಿಂದ ಡೆಲ್ಲಿಗೆ ಎಂದಾಗಬೇಕು ಅದನ್ನು ಪ್ರತಿಪಾದಿಸಲು ರಾಷ್ಟ್ರ ನಾಯಕರ ವಿರುದ್ಧ ಸ್ಪರ್ಧೆಗೆ ಚಿಂತನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಈಗಿನ ಕಾಲದಲ್ಲಿ ಯಾವುದೇ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಮಗೆ ವಿಧೆಯರಾಗಿರುವವರನ್ನು, ತಮ್ಮ ಸೇವೆ ಮಾಡುವವರನ್ನು, ತಮ್ಮನ್ನು ಆರಾಧಿಸುವವರನ್ನು ಆರಿಸುತ್ತಾರೆ. ಅದರ ಬದಲು ಜನರಿಗೆ ವಿಧೇಯರಾಗಿರುವವರನ್ನು, ಜನಸೇವೆ ಮಾಡುವವರನ್ನು ಆರಿಸುವಂತಾಗಬೇಕು. ಜನಪ್ರತಿನಿಧಿ ತಮ್ಮ ನಾಯಕರನ್ನು ರಾಜರೆಂದು ತಿಳಿಯುವ ಬದಲು ತಮಗೆ ಮತ ನೀಡಿದ ಮತದಾರರನ್ನು-ಗೆಲ್ಲಿಸಿದವರನ್ನು ರಾಜರೆಂದು ತಿಳಿಯ ಬೇಕು. ಹಾಗೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ. ಆಡಳಿತ ಮೇಲಿನಿಂದ(ಕೇಂದ್ರ) ಅಲ್ಲ, ಕೆಳಗಿನಿಂದ(ಗ್ರಾಮ) ಮೇಲಕ್ಕೆ ಹೋಗಬೇಕು ಎಂಬ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಮುಂದಿಟ್ಟುಕೊಂಡು ಅದನ್ನು ರಾಜ್ಯದ ಮತ್ತು ದೇಶದ ನಾಯಕರ ಗಮನಕ್ಕೆ ತರಲಿಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ನಾಯಕರ ವಿರುದ್ಧ ಸ್ಪರ್ಧಿಸಿದರೆ ಹೇಗೆ ಎಂಬ ಚಿಂತನೆಯಲ್ಲಿದ್ದೇನೆ. ಸ್ಪರ್ಧಿಸಿದರೆ ಅಲ್ಲಿಯ ಮತದಾರರ ಮುಂದೆ ಆ ವಿಷಯವನ್ನಿಟ್ಟು ಅದನ್ನು ಪ್ರತಿಪಾದಿಸಬೇಕೆಂದಿದ್ದೇನೆ. ಬಲತ್ಕಾರದ ಬಂದ್ ಅದರಿಂದ ಆಗುತ್ತಿರುವ ತೊಂದರೆಗಳನ್ನು ಮತ್ತು ಸಾಮಾಜಿಕ ಜಾಲತಾಣದ ದುರುಪಯೋಗದಿಂದ ಜನತೆಗೆ ಆಗುತ್ತ್ತಿರುವ ಸಮಸ್ಯೆಗಳನ್ನು ರಾಷ್ಟ್ರ ಮಟ್ಟದಲ್ಲಿಯೂ ನಾಯಕರ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಕಾರಣವಾಗಲಿ ಎಂಬ ಆಶಯವೂ ಈ ಸ್ಪರ್ಧೆಯ ಹಿಂದಿದೆ ಎಂದು ತಿಳಿಸಲು ಸಂತೋಷಪಡುತ್ತೇನೆ. ಈ ಸ್ಪರ್ಧೆಯ ವಿಷಯದ ಬಗ್ಗೆ ಮತ್ತು ಅಲ್ಲಿ ಮಂಡಿಸಬೇಕಾದ ವಿಚಾರಗಳ ಕುರಿತು ಜನಾಭಿಪ್ರಾಯವನ್ನು, ಸಲಹೆಯನ್ನು ಸಂಗ್ರಹಿಸುತ್ತಿದ್ದೇ ನೆ. ಅಭಿಪ್ರಾಯ, ಸಲಹೆಗಳಿಗೆ ಸ್ವಾಗತ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.