ಸಾರ್ಥಕ ಸೇವಾ ಚಾರಿಟೆಬಲ್ ಟ್ರಸ್ಟ್‌ನಿಂದ ಅನಾರು ಶಾಲೆಗೆ ನೆರವು

ಪಟ್ರಮೆಯ ಅನಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಭಾಂಗಣ ಕಟ್ಟಡ ನಿರ್ಮಾಣಕ್ಕೆ ಶಾಲೆಯ ಹಳೆ ವಿದ್ಯಾರ್ಥಿಗಳಾದ ಕೆಮನೋಡಿ ರಾಜಾರಾಮ್, ರಾಘವ, ಮದುಸೂಧನ್, ಹಾಗೂ ಡಾ. ಮುರಳೀಧರ್ ಸಹೋದರರು ತಮ್ಮ ಸಾರ್ಥಕ ಸೇವಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ 400 ಬ್ಯಾಗ್ ಸಿಮೆಂಟಿನ ಮೊತ್ತ 1 ಲಕ್ಷದ 56 ಸಾವಿರ ರೂಗಳ ಕೊಡುಗೆಯನ್ನು ಇತ್ತೀಚೆಗೆ ಶಾಲೆಗೆ ನೀಡಿದರು.

ಅನಾರು ಶಾಲಾ ಕಟ್ಟಡಗಳು ಬಿದ್ದು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಕೊಠಡಿಗಳಿಲ್ಲದೇ ಪರದಾಡುತ್ತಿರುವ ಸಂದರ್ಭದಲ್ಲಿ ಊರವರೇ ದಾನಿಗಳ ನೆರವಿನಿಂದ ಮೂರು ತರಗತಿ ಕೋಣೆಗಳನ್ನು ಒಳಗೊಂಡ ಒಂದು ಸಭಾಂಗಣ ನಿರ್ಮಿಸಲು ನಿರ್ಧರಿಸಿ ಸಭಾಂಗಣ ನಿರ್ಮಾಣ ಸಮಿತಿ ರಚಿಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ತಾವು ಕಲಿತ ಶಾಲೆಗೆ ಭೇಟಿ ನೀಡಿ ಅಲಿ ಓದುತ್ತಿರುವ ಮಕ್ಕಳ ಭವಣೆ ನೋಡಿ ಇದೇ ಶಾಲೆಯ ಪೂರ್ವ ವಿದ್ಯಾರ್ಥಿಗಳ ಈ ಟ್ರಸ್ಟ್ ಮೂಲಕ ಈ ಸಹಾಯಧನವನ್ನು ನೀಡಲಾಯಿತು.

ಸಭಾಂಗಣ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಪಂಚಾಯತು ಸದಸ್ಯ ಶ್ಯಾಮರಾಜ್ ಬೋಳೋಡಿ ಚಕ್ ಸ್ವೀಕರಿಸಿದರು. ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ದೇವಪಾಲ ಅಜ್ರಿ, ಡೀಗಯ್ಯಗೌಡ ಮಾಸ್ಟ್ರು ಕಾಯಿಲ, ಚಂದ್ರ ಶೇಖರ ಗೌಡ ಅನಾರು, ದೊಲ್ಲಗೌಡ ಜಾಲು, ಡೀಗಯ್ಯ ಗೌಡ ಅಶ್ವತ್ತಡಿ, ವಸಂತ ಟೈಲರ್, ಸತೀಶ್ ಶಾಂತಿಕಾಯ, ನೀಲಯ್ಯ ಕಲ್ಲಾಜೆ, ಕಟ್ಟಡ ನಿರ್ಮಾಣಕಾರ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.