ದೇವರಮನೆ ಕಾಲಭೈರವೇಶ್ವರಸ್ವಾಮಿ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆಕಾಣಿಕೆ

ಉಜಿರೆ: ಒಂಭತ್ತು ಮಾರಿಘಾಟಿ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿ ಗುತ್ತಿ ಗ್ರಾಮ ದೇವರಮನೆ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಇಲ್ಲಿ  ಏ. 7 ರಿಂದ  ಏ. 14 ರ ವರೆಗೆ ಶ್ರೀ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದ್ದು , ಆ ಪ್ರಯುಕ್ತ  ಶ್ರೀ ಕ್ಷೇತ್ರಕ್ಕೆ  ಬೆಳ್ತಂಗಡಿ  ತಾಲೂಕಿನ ಭಕ್ತರಿಂದ  ಹೊರೆಕಾಣಿಕೆ  ಸಮರ್ಪಣೆ ಏ. 11 ರಂದು ನಡೆಯಿತು.

ಉಜಿರೆಯ ಕಾಲಭೈರವೇಶ್ವರ ಸಹಕಾರಿ ಸಂಘದ ವಠಾರದಲ್ಲಿ ತಾಲೂಕಿನ ಎಲ್ಲ ಗ್ರಾಮ ಸಮಿತಿಗಳಿಂದ ಹೊರೆಕಾಣಿಕೆ ತಂದು ಇಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ  ಹೊರೆಕಾಣಿಕೆ  ಮೆರವಣಿಗೆ ಹೊರಟಿತು. ಈ ಸಂಧರ್ಭದಲ್ಲಿ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಹಕಾರಿ ನಿಯಮಿತ ಇದರ ಅಧ್ಯಕ್ಷ ರಂಜನ್ ಜಿ ಗೌಡ, ಸಂಘದ ತಾ| ಅಧ್ಯಕ್ಷ ಕೆರಿಮಾರ್ ಬಾಲಕೃಷ್ಣ ಗೌಡ,    ಲಕ್ಷ್ಮಣ ಗೌಡ ಬಂಗಾಡಿ, ದಾಮೋದರ ಗೌಡ ಸುರುಳಿ, ಸುಧಾಕರ ಗೌಡ ಧರ್ಮಸ್ಥಳ, ಅನಿಲ್ ಗೌಡ ಅಂತರ ಉಜಿರೆ, ದಿನೇಶ್ ಗೌಡ ಕಲ್ಲಾಜೆ, ಬಾಲಕೃಷ್ಣ ಗೌಡ ಕಲ್ಲಾಜೆ ,ವಿವಿಧ ಗ್ರಾಮ ಸಮಿತಿಗಳಿಂದ ಆಗಮಿಸಿದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.