ಅಳದಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೋದಿ ಸರಕಾರದ ಅಭಿವೃದ್ಧಿ ಕಾರ್ಯ ಮನೆ-ಮನೆ ತಲುಪಿಸಿ: ಹರಿಕೃಷ್ಣ ಬಂಟ್ವಾಳ

ಅಳದಂಗಡಿ: ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಬಡ ಜನರಿಗೆ, ರೈತರಿಗೆ, ಸೈನಿಕರಿಗೆ ಉದ್ಯೋಗಸ್ಥರಿಗೆ ಅನುಕೂಲವಾಗುವ ಹಲವಾರು ಜನಪರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದೆ. ದೇಶದ ಜನರ ಭವಿಷ್ಯ ಸರಿಪಡಿಸುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರಕಾರ 5 ವರ್ಷ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಜನರು ನಳಿನ್ ಕುಮಾರ್‌ಗೆ ಮತದಾನ ಮಾಡುವ ಮೂಲಕ 3 ಲಕ್ಷ ಅಂತರದಲ್ಲಿ ಗೆಲ್ಲಿಸಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅವರು ಎ.9 ರಂದು ಅಳದಂಗಡಿ ಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮೋದಿ ಎಂದರೆ ಪೊಲಿಟಿಕಲ್ ಕರೆಂಟ್, ಮೋದಿ ಎಂದರೆ ರಕ್ಷಣೆ ನೀಡುವ ಭಾರತೀಯ, ಮೋದಿ ಎಂದರೆ ಅಭಿವೃದ್ಧಿಯ ಗುರು, ಮೋದಿ ಎಂದರೆ ಭಾರತದ ಶಕ್ತಿಶಾಲಿ ಗುರು, ಅಂತಾಹ ಮಹಾನ್ ವ್ಯಕ್ತಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗದ ಹಲವಾರು ಕೆಲಸವನ್ನು ಮೋದಿ ಸರಕಾರ ಮಾಡಿಕೊಟ್ಟಿದೆ. 40 ಎಕ್ರೆ ಜಾಗದಲ್ಲಿ ಸೈನಿಕರ ಸ್ಮಾರಕ ನಿರ್ಮಾಣವಾಗಿದೆ. 18475  ಗ್ರಾಮಗಳಿಗೆ ವಿದ್ಯುತ್ ನೀಡಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಹದಿನಾರು ಸಾವಿರದ ಐನೂರು ಕೋಟಿ ತಂದು ದ.ಕ ದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ನಮ್ಮ ಸ್ಪರ್ಧೆ ಕಾಂಗ್ರೆಸ್ ಜೊತೆ ಅಲ್ಲ ಕಾಂಗ್ರೆಸ್ ಸ್ಪರ್ಧೆ ಅವರ ಅಸ್ತಿತ್ವ ಉಳಿಸಲು, ಬಿಜೆಪಿ ಸ್ಪರ್ಧೆ ಅಭಿವೃದ್ಧಿಯ ಕಾರ್ಯಕ್ಕೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಯುವ ಸಮುದಾಯಕ್ಕೆ ಆದರ್ಶವಾದ ನಳಿನ್ ಕುಮಾರ್ ಕಟೀಲ್‌ರವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ50 ಸಾವಿರ ಮತದ ಅಂತರದಲ್ಲಿ ನಳಿನ್ ಕುಮಾರ್ ಕಟೀಲು ಮುಂದೆ ಬರುತ್ತಾರೆ. 93 ಸಾವಿರ ಫಲಾನುಭವಿಗಳಿಗೆ ಆಯುಷ್ಮಾನ್ ಪ್ರಯೋಜನ ದ.ಕ ದಲ್ಲಿ ಸಿಕ್ಕಿದೆ. 14 ಸಾವಿರ ಉಜ್ವಲ ಯೋಜನೆಯ ಗ್ಯಾಸ್ ವಿತರಣೆ ಆಗಿದ್ದು ದ.ಕ ದಲ್ಲಿ ಬೆಳ್ತಂಗಡಿ ಪ್ರಥಮ, ಅಲ್ಲದೆ ನರೇಂದ್ರ ಮೋದಿಯವರು ಜಾರಿಗೊಳಿಸಿದ ಜನಜೌಷಧಿ, ಆಯುಷ್ಮಾನ್, ಉಜ್ವಲ, ಹೀಗೆ ವಿವಿಧ ಯೋಜನೆಗಳ ಮಾಹಿತಿ ಗ್ರಾಮ ಮಟ್ಟದಲ್ಲಿ ಜನರಿಗೆ ತಲುಪಿಸುವುದರ ಜೊತೆಗೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದರು.
ವೇದಿಕೆಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಅಳದಂಗಡಿ ಸಹಕಾರಿ ಸಂಘದ ಅಧ್ಯಕ್ಷ ಶಿವ ಭಟ್, ಅಳದಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ, ಬಿಜೆಪಿ ಮಂಡಲ ಕಾರ್ಯದರ್ಶಿ ಸೀತಾರಾಮ ಬಿ.ಎಸ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಉಪಸ್ಥಿತರಿದ್ದರು.
ಅಳದಂಗಡಿ ಗ್ರಾ.ಪಂ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿ, ಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಆರ್ ಭಾಸ್ಕರ್ ಸಾಲಿಯಾನ್ ವಂದಿಸಿದರು. ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೇಸರಿ ಶಾಲು ಧರಿಸಿಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಹಿಂದುತ್ವ ಕೇವಲ ಕೇಸರಿ ಶಾಲು ಧರಿಸಿದರೆ ಆಗುವುದಿಲ್ಲ…. ಮನಸ್ಸಿನ ಒಳಗಿನಿಂದ ಬರಬೇಕು….
– ಹರೀಶ್ ಪೂಂಜ, ಶಾಸಕ ಬೆಳ್ತಂಗಡಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.