ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು: ಶ್ರೀ ಅನಂತ ಪದ್ಮನಾಭ ದೇವರ ನೂತನ ಪ್ರತಿಷ್ಠಾಬಂದ ಬ್ರಹ್ಮಕಲಶೋತ್ಸವವು ಮೇ.11 ರಿಂದ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|.ಡಿ ವೀರೇಂದ್ರ ಹೆಗ್ಗಡೆಯವರು ಎ.8 ರಂದು ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಮಾರ್ಗದರ್ಶಕ ಉಜಿರೆಯ ಯು. ವಿಜಯರಾಘವ ಪಡುವೆಟ್ನಾಯ, ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂದರ್ ಕುಮಾರ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾಧಿಕಾರಿ ಜಯಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್ ಜತ್ತಣ್ಣ ಗೌಡ, ಅಧ್ಯಕ್ಷ ಆನಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಿರೀಶ್ ಬಾರಿತ್ತಾಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ತಿಮ್ಮಪ್ಪ ಗೌಡ, ಅಧ್ಯಕ್ಷ ಶ್ರೀನಿವಾಸ ಗೌಡ ವಕೀಲರು, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮ್ಮುಣ್ಣಾಯ, ಸಮಿತಿಯ ಉಪಾಧ್ಯಕ್ಷ ಬಾಬು ಗೌಡ ಅಲಕೆದಡ್ಡ, ಲಿಂಗಪ್ಪ ಪೂಜಾರಿ ಬನಂದೂರು, ದೇಜಪ್ಪ ಗೌಡ ಎಳ್ಳುಗದ್ದೆ, ಕಾರ್ಯದರ್ಶಿ ದಿನೇಶ್ ಪೂಜಾರಿ ಉಪ್ಪಾರ್, ಸತೀಶ್ ಗೌಡ ಎಳ್ಳುಗದ್ದೆ, ಯೋಜನಾ ಮೇಲ್ವಿಚಾರಕಿ ಅಶ್ವಿತಾ, ಸೇವಾ ಪ್ರತಿನಿಧಿ ಕು. ಆಶಾ, ಆದಿತ್ಯ ಶರ್ಮ ಮಂಡಾಲು ಹಾಗೂ ಸಮಿತಿಯ ಪದಾಧಿಕಾರಿಗಳಾದ ಡೀಕಯ್ಯ ಗೌಡ ಅರಣೆಮಾರು, ದಾಮೋದರ ಕಾಡಂಡ, ಒಕ್ಕೂಟದ ಅಧ್ಯಕ್ಷರಾದ ರತ್ನಾಕರ ಆಚಾರ್ಯ, ಶಿವಪ್ಪ ಗೌಡ ಉರೆಜ್ಜ, ಜನಾರ್ಧನ ಪೂಜಾರಿ, ಸೂರಪ್ಪ ಗೌಡ ಭಂಡಾರಿ ಮಜಲು, ಶಶಿಧರ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ವಿಗೆ ಹೆಗ್ಗಡೆಯವರು ಶುಭ ಪ್ರಶಂಸೆಯನ್ನು ನುಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.