ಗೇರುಕಟ್ಟೆ: ಕಾಂಗ್ರೆಸ್ – ಜೆಡಿಎಸ್.ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ರೈ. ಚುನಾವಣಾ ಪ್ರಚಾರ ಸಭೆ

“ನಳಿನ್ ಕಟೀಲ್ ರವರ ಕೇಸರಿಯಲ್ಲಿ ಕಪಟ ಹಿಂದುತ್ವ, ನಮ್ಮ ಕೇಸರಿಯಲ್ಲಿ ನೈಜ ಹಿಂದುತ್ವ“: ಮಿಥುನ್ ರೈ

ಗೇರುಕಟ್ಟೆ: ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ರೈ ಯವರ ಚುನಾವಣಾ ಪ್ರಚಾರ ಸಭೆ  ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ನಿಲ್ದಾಣದಲ್ಲಿ ನಡೆಯಿತು.

ದ.ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮಹಾ ಚುನಾವಣೆ ಎ.18 ರಂದು ನಡೆಯಲಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ  ನಳಿನ್ ಕುಮಾರ್ ಕಟೀಲ್ ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಜಾತಿಯ ಸಂಘಟನೆಯನ್ನು ವಿಭಜನೆ ಮಾಡಿ ಜಿಲ್ಲೆಯಲ್ಲಿ ಕೋಮು ಗಲಬೆಗಳ ಸೃಷ್ಟಿ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ವೇಗವೂ ಸಂಪೂರ್ಣ ನೆಲಕಚ್ಚಿದೆ. ಹೊಸ ಯೋಚನೆಗಳಿಲ್ಲ- ಯೋಜನೆಗಳಿಲ್ಲ. ಜಿಲ್ಲೆಯ ಸಂಸದರು ಕಳೆದ 10 ವರ್ಷಗಳಲ್ಲಿ ರೈತರ, ಬಡವರ ಯುವ ಜನರ, ವಿದ್ಯಾರ್ಥಿಗಳ, ಮಹಿಳೆಯರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತದೇ ಊರಿನ ಹಾಗೂ ಜನರ ಅಭಿವೃದ್ಧಿ ಮರೀಚಿಕೆಯಾಗಿದೆ. ಕಳೆದ 5 ವರ್ಷಗಳ ಬಿಜೆಪಿ ದುರಾಡಳಿತಕ್ಕೆ ಇತಿಶ್ರೀ ಹಾಡಬೇಕಾದ ಸಮಯ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಜಿಲ್ಲೆಯ ಪ್ರಜ್ಞಾವಂತ ಮತದಾರು ಅಸಮರ್ಥ ಸಂಸದರನ್ನು ಸೋಲಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಮರ್ಥ ಯುವ ನಾಯಕ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ  ನನಗೆ ನಿಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿ ಕೊಡುವ ಮೂಲಕ ದೇಶದ ಸಂವಿಧಾನ ಉಳಿಸಲು, ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ಸೌಹಾರ್ದ-ಸಾಮರಸ್ಯ-ಸಹಬಾಳ್ವೆಯ ಸಂಸ್ಥಾಪನೆಗೆ ಕಾಂಗ್ರೆಸ್ ಪಕ್ಷದ ಹಸ್ತ ಚಿಹ್ನೆಗೆ ಮತ ಬೇಕೆಂದೇ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ ಮಾತನಾಡುತ್ತಾ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಿಂದ ರೈತರಿಗೆ ವಿವಿಧ ರೀತಿಯ ಸವಲತ್ತುಗಳನ್ನು ನೀಡಿರುವ ಬಗ್ಗೆ ವಿವರವಾಗಿ ತಿಳಿಸಿದರು. ಮಾಜಿ ಸಚಿವ ಗಂಗಾಧರ ಗೌಡ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ವಿ. ಕಿಣಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶರತ್, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ತಾ| ಯುವ ಕಾಂಗ್ರೆಸಗ ಅಧ್ಯಕ್ಷ ಅಭಿನಂದನ್, ತಾ| ಜೆಡಿಎಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕ ನವೀನ್‌ಚಂದ್ರ ಶೆಟ್ಟಿ ಕಾಪು, ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಎ.ಸಿ ಜಯರಾಜ್, ತಾ.ಪಂ. ಸದಸ್ಯ ಪ್ರವೀಣ್ ಗೌಡ ಕೊಯ್ಯೂರು, ಜಿ. ಪಂ. ಮಾಜಿ ಸದಸ್ಯ ಶೈಲೇಶ್ ಕುಮಾರ್, ಕಾಂಗ್ರೆಸ್ ಮುಖಂಡ ರಂಜನ್ ಜಿ. ಗೌಡ, ಡಿಸಿಸಿ ಉಪಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಮುಖಂಡರಾದ ಜೆಸಿಂತಾ ಮೋನಿಸ್ ಮೇಲಂತಬೆಟ್ಟು, ಚಂದನ್ ಕಾಮತ್, ಕಳಿಯ ಪಂ. ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯರು, ಸ್ಥಳೀಯ ಪಂ.ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.