ಜಗತ್ತಿಗೆ ಭಾರತ ದೇವಭೂಮಿ: ಸೀತಾರಾಮ ಕೆದಿಲಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿಶಿಲ: ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಬಹಳಷ್ಟು ಅವಕಾಶಗಳಿದ್ದು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕೆಂದು ಆರ್.ಎಸ್.ಎಸ್‌ನ ಹಿರಿಯ ನೇತಾರ 35 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ ಸೀತಾರಾಮ ಕೆದಿಲಾಯರವರು ಎ.6 ರಂದು ಯುಗಾದಿ ಸಂದರ್ಭ ಶಿಶಿಲಕ್ಕೆ ಆಗಮಿಸಿ ಸಂದೇಶ ನೀಡಿದರು.
ಜಗತ್ತಿಗೆ ದೇವಭೂಮಿಯಂತಿರುವ ಈ ಭಾರತ ದೇಶದಲ್ಲಿ ಹುಟ್ಟುವುದೇ ಪುಣ್ಯ ಎಂದು ತಿಳಿಸಿದ ಅವರು, ನಾನು ಪಾದಯಾತ್ರೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ನೀವು ಮಾಡುವ ಈ ಪುಣ್ಯದ ಕೆಲಸದಿಂದ ದೇಶಕ್ಕೆ ಒಳ್ಳೆಯದಾಗಲಿ ಎಂದಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಮೂಡೆತ್ತಾಯ, ಚಂದ್ರಶೇಖರ ಗೌಡ ಧರ್ಮಸ್ಥಳ, ಸೂರ್ಯನಾರಾಯಣ ಭಟ್, ಕೊರಗಪ್ಪ ಗೌಡ, ಕರುಣಾಕರ,ಇನ್ನಿತರ ಗಣ್ಯರು ಉಪಸ್ಥಿತರಿದ್ದು, ಎಲ್ಲರಿಗೂ ಬೇವು-ಬೆಲ್ಲ ಹಂಚಲಾಯಿತು. ಗ್ರಾಮಸ್ಥರ ಪರವಾಗಿ ಜಯರಾಮ ನೆಲ್ಲಿತ್ತಾಯ ರವರು ಸೀತಾರಾಮ ಕೆದಿಲಾಯರನ್ನು ಶಾಲು ಹೊದಿಸಿ ಸನ್ಮಾನಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.