ಚಂದ್ಕೂರು ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮತ್ತೆ10 ಲಕ್ಷ ರೂ. ದೇಣಿಗೆ

ದೇಣಿಗೆ ಮೊತ್ತವನ್ನು ಡಿ ಹರ್ಷೇಂದ್ರ ಕುಮಾರ್ ಅವರು ದೇವಳದ ಸಮಿತಿಗೆ ಹಸ್ತಾಂತರಿಸುತ್ತಿರುವುದು

ಲಾಯಿಲ: ಆಯುತ ಚಂಡಿಕಾಯಾಗದ ಮೂಲಕ ವಿಶ್ವಪ್ರಸಿದ್ಧಿ ಪಡೆದಿರುವ ಲಾಯಿಲ ಗ್ರಾಮದ ಚಂದ್ಕೂರು ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಸದ್ರಿ ದೇವಾಲಯದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 10 ಲಕ್ಷ ರೂ. ಮೊತ್ತದ ಚೆಕ್ಕನ್ನು ಎ. 9 ರಂದು ಡಿ ಹರ್ಷೇಂದ್ರ ಕುಮಾರ್ ಅವರು ಚಂದ್ಕೂರು ದೇವಳದಲ್ಲಿ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ದೇವಳದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನಡೆಸಿದ ಅವರು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ಪಡೆದು ಕೆಲವು ನಿರ್ದೇಶನಗಳನ್ನು ನೀಡಿದರು. ದೇವಾಲಯದಲ್ಲಿ ಈಗಾಗಲೇ 1.45 ಕೋಟಿ ರೂ. ಕಾಮಗಾರಿ ನಡೆದಿದ್ದು ಶ್ರೀ ಕ್ಷೇತ್ರದಿಂದ ಈ ಹಿಂದೆಯೂ 5 ಲಕ್ಷ ರೂ.ಗಳನ್ನು ನೀಡಲಾಗಿತ್ತು.
ಚೆಕ್ ವಿತರಣೆ ವೇಳೆ ದೇವಳದ ಆಡಳಿತ ಮೊಕ್ತೇಸರ ಎನ್ ಧನಂಜಯ ಅಜ್ರಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಬಿ ವಿಠಲ ಶೆಟ್ಟಿ, ಪ್ರ. ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿಗಳಾದ ವಸಂತ ಸುವರ್ಣ, ರಾಜೇಶ್ ಶೆಟ್ಟಿ, ಗೌರವ ಸಲಹೆಗಾರರರಾದ ಚಿತ್ತರಂಜನ್, ಮುನಿರಾಜ ಅಜ್ರಿ, ಮಾಧ್ಯಮ ಸಮಿತಿ ಸಂಚಾಲಕ ಪ್ರಸಾದ ಶೆಟ್ಟು ಏಣಿಂಜ, ಪ್ರಮುಖರಾದ ಗಿರೀಶ್ ಡೋಂಗ್ರೆ ಮತ್ತು ರುಕ್ಮಯ್ಯ ಕನ್ನಾಜೆ, ಯೋಗೀಶ್ ಭಿಡೆ ಬಜಕ್ರೆಸಾಲ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.