ಲೋಬೋ ಟಿ.ವಿ.ಎಸ್ : ಯುಗಾದಿ ಪ್ರಯುಕ್ತ 22 ದ್ವಿಚಕ್ರ ವಾಹನಗಳ ಕೀ ಹಸ್ತಾಂತರ

ಬೆಳ್ತಂಗಡಿ : ಟಿ.ವಿ.ಎಸ್ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಮತ್ತು ಸೇವಾ ಸಂಸ್ಥೆ ಲೋಬೋ ಟಿ.ವಿ.ಎಸ್ ವತಿಯಿಂದ ಎ.6 ರಂದು ಯುಗಾದಿ ಹಬ್ಬದ ಪ್ರಯುಕ್ತ ಸಂಸ್ಥೆಯ ಬೆಳ್ತಂಗಡಿ ಹಾಗೂ ಮಡಂತ್ಯಾರ್ ಶೋರೂಂ ನಲ್ಲಿ 22  ಗ್ರಾಹಕರಿಗೆ ತಮ್ಮ ಆಯ್ಕೆಯ ಟಿವಿಎಸ್ ದ್ವಿಚಕ್ರ ವಾಹನಗಳ ಕೀ ಹಸ್ತಾಂತರಿಸಲಾಯಿತು.
ಇದೀಗ ಟಿವಿಎಸ್ ದ್ವಿಚಕ್ರ ವಾಹನಗಳು ವಿಶೇಷ ತಂತ್ರಜ್ಞಾನಗಳ ಮೂಲಕ ಎಲ್ಲ ಗ್ರಾಹಕರ ಮೆಚ್ಚಿನ ವಾಹನವಾಗಿದ್ದು ವಿವಿಧ ಶೈಲಿ ಬಣ್ಣಗಳಲ್ಲಿ ಲಭ್ಯವಿದೆ. ಹೊಸತಾಗಿ ಬಂದಿರುವ ಟಿವಿಎಸ್ ರೇಡಿಯಾನ್,ಎಂಟಾರ್ಗ್ ಎಕ್ಸ್‌ಎಲ್ ಟಚ್ ಸ್ಟಾರ್ಟ್ ಜ್ಯುಪಿಟರ್ ಗ್ರ್ಯಾಂಡ್ ವಾಹನಗಳು ಸಂಸ್ಥೆಯಲ್ಲಿ ಲಭ್ಯವಿದೆ. ಯುವಜನರ, ಮಹಿಳೆಯರ ಅಚ್ಚುಮೆಚ್ಚಿನ ನವನವೀನ ಆಧುನಿಕ ಮಾದರಿಯ ಟಿವಿಎಸ್ ದ್ವಿಚಕ್ರ ವಾಹನಗಳು ಲೋಬೋ ಟಿವಿಎಸ್‌ನಲ್ಲಿ ಲಭ್ಯವಿದೆ ಎಂದು ಮಾಲಕ ರೊನಾಲ್ಡ್ ಲೋಬೋ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.