ಎ.24-ಮೇ.3: ಬಳ್ಳಮಂಜದಲ್ಲಿ ಮೇಷ ಜಾತ್ರೆ

ಬಳ್ಳಮಂಜ: ಪುರಾಣ ಪ್ರಸಿದ್ಧವಾದ ಮಹತೋಬಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನವು ತುಳುನಾಡಿನ ಪ್ರಖ್ಯಾತ ನಾಗಕ್ಷೇತ್ರಗಳಲ್ಲಿ ಒಂದಾಗಿದೆ.
ಇಲ್ಲಿ ಪ್ರತೀ ವರ್ಷದಂತೆ ಜರಗುವ ವಾರ್ಷಿಕ ಮೇಷ ಜಾತ್ರೆಯು ಎ.24 ರಿಂದ ಮೇ. 3 ರ ವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಎ.24 ರಂದು ಬೆಳಿಗ್ಗೆ ಸೀಯಾಳ ಅಭಿಷೇಕ, ಮಹಾಪೂಜೆ, ರಾತ್ರಿ ಧ್ವಜಾರೋಹಣ, ಉತ್ಸವ, ವಸಂತ ಸೇವೆ. ಎ.25 ರಂದು ಮಹಾಪೂಜೆ, ರಾತ್ರಿ ಉತ್ಸವ ನಡೆಯಲಿದೆ. ಎ.26 ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ, ರಾತ್ರಿ ಮಹಾಪೂಜೆ, ಉತ್ಸವ, ಎ.27 ರಂದು ಸಂಜೆ ಕೊಪ್ಪರಿಗೆ ಏರಿಸುವುದು, ಬಯ್ಯದ ಬಲಿ ಪ್ರಾರಂಭ, ಎ.28 ರಂದು ರಾತ್ರಿ ಕೆರೆ ಆಯನ ಉತ್ಸವ, ಮೂಡುಗೋಪುರದ ಸಮಾರ್ಪಣಾ ಸಮಾರಂಭದ ಪ್ರಯುಕ್ತ ಶಿಲ್ಪಿಮರ್ಯಾದೆ ನೂತನ ಮೂಡುಗೋಪುರದ ಪ್ರತಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ಮಹಾಸುದರ್ಶನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ ರಕ್ಷೆ ಎ.29 ರಂದು ಬೆಳಿಗ್ಗೆ ಬ್ರಹ್ಮಕಲಶ ದಿನಾಚರಣೆ ಮೂಡುಗೋಪುರ ಸಮರ್ಪಣೆ ಪ್ರಯುಕ್ತ ಪಂಚವಿಶಂತಿ ದ್ರವ್ಯ ಕಲಶ ಪ್ರತಿಷ್ಠೆ. 8 ಜನ ವೇದಜ್ಞರಿಂದ ಋಗ್ವೇದದ 8 ಅಷ್ಟಕಗಳ ಪಾರಾಯಣ ಪೂರ್ವಕ ಸಂಹಿತಾಕಲಶ, ಅಧಿವಾಸ ಹೋಮ, ಪವಮಾನ ಹೋಮ, ದ್ವಾದಶನಾರಿಕೇಲ, ಅಷ್ಟ ದ್ರವ್ಯ ಗಣಹೋಮ, ಈಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಆಶ್ಲೇಷಾ ಬಲಿ, ಬ್ರಹ್ಮಚಾರಿ ಆರಾಧನೆ, ಗಣಪತಿ ದೇವರಿಗೆ ಕಾಟಾಹಾಪೂಪ ಸಮರ್ಪಣೆ, ನೂತನ ಮೂಡುಗೋಪುರದಲ್ಲಿ ಚಕ್ರಾಬ್ಜ ಮಂಡಲ ಪೂಜೆ, ದ್ವಾದಶಮೂರ್ತಿ ಆರಾಧನೆ, ನೂತನ ಮೂಡುಗೋಪುರ ಸಮರ್ಪಣೆ ನಡೆಯಲಿದೆ. ಎ.30  ರಂದು ರಾತ್ರಿ ಗಂಟೆ 7 ರಿಂದ ಚಂದ್ರಮಂಡಲೋತ್ಸವ, ಮೇ.1 ರಂದು ಪೂರ್ವಹ್ನ ದರ್ಶನ ಬಲಿ, ಸಂಜೆ 6ಕ್ಕೆ ಮಹಾರಥೋತ್ಸವ, ಶ್ರೀ ಭೂತ ಬಲಿ, ಮೇ.2 ರಂದು ಕವಾಟೋದ್ಘಾಟನೆ, ವಸಂತ ಸೇವೆ, ಸಂಜೆ ಅವಭೃತ ರಾತ್ರಿ ಧ್ವಜಾವರೋಹಣ, ಮೇ.3 ರಂದು ಮಹಾಸಂಪ್ರೋಕ್ಷಣೆ, ಹಾಗೂ ಪ್ರತೀ ದಿನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.