ಚುನಾವಣಾ ಬಹಿಷ್ಕಾರದ ಎಳಚಿತ್ತಾಯ ನಗರ ನಿವಾಸಿಗಳಿಗೆ ಎಸ್.ಐ ರವಿ ಬಿ.ಎಸ್ ರಿಂದ ಬೆದರಿಕೆ ಆರೋಪ

ಬೆಳ್ತಂಗಡಿ ತಾಲೂಕಿನ ಉಜಿರೆ- ಲಾಯಿಲ- ಕೊಯ್ಯೂರು ಗಡಿ ಗ್ರಾಮದ ಕಾಮ್ರೆಡ್ ಎಳಚಿತ್ತಾಯ ನಗರ ನಿವಾಸಿಗಳಾದ ನಾವು ಪ್ರಜಾತಂತ್ರ ವ್ಯವಸ್ಥೆಯಡಿ ನ್ಯಾಯ ಕೇಳಲು ನಮ್ಮ ಮೂಲಭೂತ ಬೇಡಿಕೆಗಳನ್ನು ಮುಂದಿಟ್ಟು ಚುನಾವಣಾ ಬಹಿಷ್ಕಾರ ಹಾಕಿದ್ದು ಸದ್ರಿ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಎಸ್.ಐ ರವಿ ಬಿ.ಎಸ್ ಅವರು ರಾತ್ರಿ ಬಂದು ಚುನಾವಣಾ ಬಹಿಷ್ಕಾರ ಸಂದೇಶ ನೀಡುವ ಬ್ಯಾನರನ್ನು ಏಕಾಏಕಿ ತೆರವುಗೊಳಿಸಿ ಮಹಿಳೆಯರೂ ಸೇರಿದಂತೆ ಪರಿಸರವಾಸಿಗಳಿಗೆ ಬೆದರಿಕೆಯೊಡ್ಡಿದ್ದಾರೆ. ಮೊಬೈಲ್ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಗ್ರಾಮಸ್ಥರ ಹೋರಾಟದ ನೇತೃತ್ವ ವಹಿಸಿರುವ ಲಕ್ಷ್ಮಣ ಜಿ.ಎಸ್ ದೂರಿದ್ದಾರೆ.
ನಗರದ ವರ್ತಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಎಷ್ಟೇ ಒತ್ತಡ ಬಂದರೂ ಹೋರಾಟ ಕೈಬಿಡೆವು:
ಗ್ರಾಮಸ್ಥರಾದ ನಾವು ಒಟ್ಟು ಸೇರಿ ಚುನಾವಣಾ ಬಹಿಷ್ಕಾರ ನಡೆಸುವ ಒಮ್ಮತದ ತೀರ್ಮಾನ ಕೈಗೊಂಡು ಎ. 4 ರಂದು ಪತ್ರಿಕಾಗೋಷ್ಠಿ ನಡೆಸಿ ಬೇನರ್ ಅಳವಡಿಸಿದ್ದೆವು. ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಬಂದು ನಮಗೆ ಸೂಕ್ತ ರೀತಿಯಲ್ಲಿ ಆಸ್ವಾಸನೆ ನೀಡಲಿ ಎಂದು ಕೇಳಿಕೊಂಡರೂ ನಮ್ಮ ಮೇಲೆ ಕೇಸು ಹಾಕುವುದಾಗಿ ಎಸ್.ಐ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಮಹಿಳೆಯರೂ ಸಹಿತ ಹಳ್ಳಿಯ ಜನರು ಭಯಭೀತರಾಗಿದ್ದಾರೆ. ಅಲ್ಲದೆ ಘಟನೆಯನ್ನು ವೀಡಿಯೋ ಮಾಡಲು ಮುಂದಾದ ವ್ಯಕ್ತಿಗಳ ಮೊಬೈಲ್ ಕಿತ್ತುಕೊಂಡು ಬೆದರಿಸಿದ್ದಾರೆ. ನಮ್ಮ ಮೇಲೆ ಎಷ್ಟೇ ಒತ್ತಡ ಬಂದರೂ ನಮ್ಮ ಹೋರಾಟ ನಿಲ್ಲದು. ಜನಪ್ರತಿನಿಧಿಗಳು ಬಂದು ನಮಗೆ ಸೂಕ್ತ ಭರವಸೆ ನೀಡುವವರೆಗೆ ಬಹಿಷ್ಕಾರ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸ್ಥಳೀಯ ನಿವಾಸಿಗಳಾದ ರವೀಂದ್ರ ನಾಯ್ಕ್, ಕೇಶವ ನಾಯ್ಕ್, ಲಕ್ಷ್ಮೀರವಿ ಕುಮಾರ್, ರೇವತಿ ರಮೇಶ್, ದುಗ್ಗಪ್ಪ ಪೂಜಾರಿ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.