ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ವೃತಪೂಜೆ

Advt_NewsUnder_1
Advt_NewsUnder_1
Advt_NewsUnder_1

 

ನಡ: ನಮ್ಮ ವ್ಯವಹಾರದಲ್ಲಿ ಸರಿಹೋಗಬೇಕಾದರೆ ದೇವರ ಮೊರೆಹೋಗುತ್ತೇವೆ. ಎಲ್ಲಾ ಸೃಷ್ಠಿಯಾದಾಗಲೇ ಗಣಪತಿ ದೇವರ ಸೃಷ್ಠಿಯೂ ಆಗಿದೆ ಎನ್ನುತ್ತಾರೆ. ನಮ್ಮ ವ್ಯವಹಾರದಲ್ಲಿ ಎಲ್ಲರಲ್ಲಿ ಒಳ್ಳೆ ವ್ಯವಹಾರ ಮಾಡಬೇಕು. ಗಣಪತಿ ದೇವರು ಕೆಟ್ಟ ಕೆಲಸ ಮಾಡುವವರಿಗೆ ವಿಘ್ನಗಳನ್ನು ಮಾಡುತ್ತಾರಂತೆ ಎಂದು ಶ್ರೀ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ನಡೆದ 108 ತೆಂಗಿನಕಾಯಿ ಗಣಪತಿ ಹೋಮ, ಸಾಮೂಹಿಕ ಶ್ರೀ ಶನೈಶ್ಚರ ವೃತ ಪೂಜಾ ಕಾರ್ಯಕ್ರಮದಲ್ಲಿ ಹೋಮದ ವಿಶೇಷತೆ ಬಗ್ಗೆ ಶ್ರೀವತ್ಸ ಐತಾಳರು ಎ.6 ರಂದು ಯುಗಾದಿಯ ದಿನದಂದು ತಿಳಿಸಿದರು.
ಅಂದು ಬೆಳಿಗ್ಗೆ ಉಜಿರೆ ವಾದಿರಾಜ ಸಬರಾಯರ ವೈದಿಕೆ ನೇತೃತ್ವದಲ್ಲಿ ಪುಣ್ಯಾಹ ವಾಚನ, ಯಂತ್ರ ಪೂಜೆ, ಅಗ್ನಿಪ್ರತಿಷ್ಠೆ ನಡೆದು ಭಕ್ತಾದಿಗಳಿಂದ ಮಹಾಸಂಕಲ್ಪ ನಡೆಯಿತು. ಹೋಮದ ಪೂರ್ಣಾಹುತಿ, ಗಂಗಾಪೂಜೆ ನಂತರ ಶನೈಶ್ಚರ ಪೂಜೆಯ ಕಲಶ ಪ್ರತಿಷ್ಠೆ, ಮದ್ಯಾಹ್ನ ಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಹೊಳ್ಳರ ನೇತೃತ್ವದಲ್ಲಿ ಈ ಪುಣ್ಯ ಕಾರ್ಯಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.