ಮೋದಿ ಮಂಗಳೂರು ವಿಜಯ ಸಂಕಲ್ಪ ರ್‍ಯಾಲಿಯಲ್ಲಿ ಪರೋಕ್ಷವಾಗಿ ಫಲಿತಾಂಶ ಪ್ರಕಟವಾಗಲಿದೆ: ಸುನಿಲ್ ಕುಮಾರ್ ವಿಶ್ವಾಸ

ಬೆಳ್ತಂಗಡಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ವಿಧಾನ ಸಭೆ ವಿಪಕ್ಷ ಮುಖ್ಯ ಸಚೇತಕ ಸುನಿಲ್

ಬೆಳ್ತಂಗಡಿ: ಬಿಜೆಪಿ ಗೆಲುವಿಗಾಗಿ  ಮೊದಲ ಹೆಜ್ಜೆ ಯಶಸ್ವಿಯಾಗಿ ಇಟ್ಟಿದೆ. ಒಂದು ಹಂತದಲ್ಲಿ ಪ್ರತೀ ಬೂತಿನ ಮನೆ ಮನೆ ಪ್ರಚಾರ ಕಾರ್ಯ ಪೂರ್ಣಗೊಂಡಿದೆ. ಎರಡನೇ ಸುತ್ತಿನ ಮನೆ ಮನೆ ಪ್ರಚಾರ ಕಾರ್ಯ ಏ. 10 ರಿಂದ ಆರಂಭವಾಗಲಿದೆ. ಒಟ್ಟು 3 ಹಂತಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಏ. 13 ರಂದು ನರೇಂದ್ರ ಮೋದೀಜಿಯವರು ಮಂಗಳೂರ ಕೇಂದ್ರ ಮೈದಾನದಲ್ಲಿ ನಡೆಯುವ ವಿಜಯ ಸಂಕಲ್ಪ ರ್‍ಯಾಲಿಗೆ ಆಗಮಿಸಲಿದ್ದಾರೆ. ಈ ರ್‍ಯಾಲಿಯಲ್ಲಿ 1 ಲಕ್ಷ ಕ್ಕೂ ಅಧಿಕ ಮಂದಿ ಭಾಗವಹಿಲಿದ್ದಾರೆ. ಒಟ್ಟಾರೆಯಾಗಿ ನಳಿನ್ ಕುಮಾರ್ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಕಾಣಲಿದ್ದು, ಏ. 13 ರಂದೇ ಪರೋಕ್ಷವಾಗಿ ಅವರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂಬ ವಿಶ್ವಾಸ ಇದೆ ಎಂದು ವಿಧಾನ ಸಭಾ ವಿಪಕ್ಷ ಮುಖ್ಯ ಸಚೇತಕ ಸುನಿಲ್ ಕುಮಾರ್ ಹೇಳಿದರು.
ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಏ. 8 ರಂದು ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಈ ದೇಶದ ನಾಯಕತ್ವ ಯಾವ ರೀತಿ ಇರಬೇಕು. ನರೇಂದ್ರ ಮೋದಿ ನೇತೃತ್ವದ ಮೋದಿ ದೇಶವನ್ನು ಮುನ್ನಡೆಸಬೇಕಾ ಅಥವಾ ಇನ್ಯಾವುದೋ ಪ್ರಾದೇಶಿಕ ನಾಯಕತ್ವ ಮುನ್ನಡೆಸಬೇಕಾ ಎಂಬುದು ಮತದಾರರರ ನಡುವೆ ಇರುವ ಚರ್ಚೆಯ ವಿಚಾಯ. 5 ವರ್ಷ ಜನಪರ ಆಡಳಿತ ಕೊಟ್ಟ ಬಿಜೆಪಿ ಯಾವುದೆ ಕಪ್ಪು ಚುಕ್ಕೆ ಇಲ್ಲದೆ ದೇಶದ ಜನತೆಗೆ ವಿಶ್ವಾಸ ಮೂಡಿಸುವಂತಹಾ ನಾಯಕತ್ವ ನೀಡಿದೆ. ಆದ್ದರಿಂದ ನರೇಂದ್ರ ಮೋದಿಯವರ ನೇತೃತ್ವವೇ ಮುಂದಿನ ಬಹುವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸಬೇಕು ಎಂದು ಮತದಾರರ ಮನಸ್ಸಿನಲ್ಲಿದೆ ಎಂದರು.

ಮೋದಿಜಿ ವಿಜಯ ಸಂಕಲ್ಪ ಯಾತ್ರೆಗೆ ತಾಲೂಕಿನಿಂದ 15 ಸಾವಿರಕ್ಕೂ ಹೆಚ್ಚು ಮಂದಿ:
ಏ. 13 ರಂದು ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಯುವ ವಿಜಯ ಸಂಕಲ್ಪ ರ್‍ಯಾಲಿಯಗೆ 1 ಲಕ್ಷ ಮಂದಿ ಸೇರಲಿದ್ದಾರೆ. ಬೆಳ್ತಂಗಡಿಯಿಂದ 15 ಸಾವಿರ ಹೆಚ್ಚು ಜನ ಭಾಗವಹಿಸಲಿದ್ದು ಇಂದು ಬೆಳಿಗ್ಗೆ ನಡೆದ ಪಕ್ಷದ ಚಿಂತನಾ ಸಭೆಯಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಇಡೀ ದೇಶದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದ್ದು, ನಮ್ಮ ಕ್ಷೇತ್ರದಲ್ಲೂ ಅದೇ ರೀತಿ ಇದೆ. ಪ್ರಥಮ ಹಂತದ ಪ್ರಚಾರದ ವೇಳೆ ಯಾವುದೇ ಕ್ಷೇತ್ರದಲ್ಲಿ ಅಲೆ ಇರುವುದು ಕಂಡು ಬಾರದೇ ಇರುವುದು ಮೊದಲ ಸುತ್ತಿನಲ್ಲಿ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಈ ಚುನಾವಣೆ ಗೆಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕ ಹರೀಶ್ ಪೂಂಜ, ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ತಾಲೂಕು ಚುನಾವಣಾ ಪ್ರಭಾರಿ ಜಿ ಆನಂದ ಬಂಟ್ವಾಳ ಮತ್ತು ಮಾಧ್ಯಮ ಸಂಯೋಜಕ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.