ಜಯರಾಮ ಶೆಟ್ಟಿ ಕುಟುಂಬಕ್ಕೆ ನೆರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ

ಬೆಳ್ತಂಗಡಿ: ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಅವರು ತನ್ನ ಹುಟ್ಟುಹಬ್ಬವನ್ನು ಅಶಕ್ತ ಜಯರಾಮ ಶೆಟ್ಟಿ ಗುರುವಾಯನಕೆರೆ ಕುಟುಂಬಕ್ಕೆ ನೆರವಾಗುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.
ಜಯರಾಂ ಶೆಟ್ಟಿಯವರು ದೀರ್ಘಕಾಲದ ಆನಾರೋಗ್ಯದಿಂದ ಬಳಲುತ್ತಿದ್ದು, ಆಸರೆಯಾಗಿ ನಿಲ್ಲಬೇಕಿದ ಆಧಾರಸ್ತಂಭ ಹಾಸಿಗೆ ಹಿಡಿದಿರುವುದು, ಮನೆಯೊಡತಿ ಹಾಗೂ ಎರಡು ಪುಟ್ಟ ಕಂದಮ್ಮಗಳ ಜೊತೆಯಲ್ಲಿ ತಮಗೆದುರಾಗಿರುವ ಕಡುಬಡತನದಲ್ಲಿ ದಿನದೂಡುತ್ತಿರುವುದನ್ನು ಮನಗಂಡು ಅವರ ಕುಟುಂಬಕ್ಕೆ ದೀಪಕ್ ನೆರವಾಗಿದ್ದಾರೆ.
ರಾಜಕೇಸರಿ ತಂಡದ ಮೂಲಕ ಅವರ ಮನೆ ಭೇಟಿ ಮಾಡಿ ೨೫ ಕೆ.ಜಿ ಅಕ್ಕಿ ಹಾಗೂ ದಿನಸಿ ಸಾಮಾನುಗಳನ್ನು ನೀಡಿ ಅವರ ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಈ ಸಂದರ್ಭ ಗಣೇಶ್ ಸಂತೆಕಟ್ಟೆ, ಗಣೇಶ್ ಲಾಯಿಲ, ಅನಿಲ್ ಹುಣ್ಸೆಕಟ್ಟೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.