ಜನಪರ ಕಾನೂನು ರಚನೆ-ಆಡಳಿತಶಾಹಿ (ಜನವಿರೋಧಿ) ಕಾನೂನು ರದ್ಧತಿಗೆ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯ ಆಡಳಿತ ಅನುಷ್ಠಾನವಾಗಲಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮಾಡುತ್ತಿರುವ ಇತ್ತೀಚೆಗಿನ ಚುನಾವಣಾ ಭಾಷಣ, ಪ್ರಚಾರಗಳು ಪರಸ್ಪರ ದೂಷಣೆಗೆ, ವೈಯಕ್ತಿಕ ನಿಂದನೆಗೂ ಕಾರಣ ವಾಗುತ್ತಿರುವುದನ್ನು ನೋಡುತ್ತಿzವೆ. ಇದು ವಿಷಯಾಧಾರಿತವಾಗಿ ದೇಶದ ಅಭಿವೃದ್ಧಿಗೆ, ಜನತೆಯ ಹಿತಕ್ಕಾಗಿ ನಡೆಯುತ್ತಿರುವ ಸ್ಪರ್ಧೆ ಎಂದೆನಿಸದೆ ವೈರಿಗಳ ನಡುವಿನ ಸ್ಪರ್ಧೆ ಎಂದಾಗುತ್ತಿದೆ. ದೇಶದ್ರೋಹಿ ಮತ್ತು ದೇಶ ಪ್ರೇಮಿಗಳ ನಡುವಿನ ಸ್ಪರ್ಧೆ ಎಂದೇ ಬಿಂಬಿಸಲಾಗುತ್ತಿದೆ. ಅದು ನಿಲ್ಲಬೇಕು. ಚುನಾವಣೆ ಕಳೆದ ಮೇಲೆ ಈ ಭಾಷಣ ಮಾಡಿದವರೆಲ್ಲಾ ಒಂದಾಗುತ್ತಾರೆ. ಈಗಲೂ ಅದು ನಡೆಯುತ್ತಿದೆ. ಇಂದು ಕಾಂಗ್ರೆಸ್‌ನ ಲ್ಲಿರುವವ ನಾಳೆ ಬಿಜೆಪಿಯ ಅಭ್ಯರ್ಥಿ. ಬಿಜೆಪಿಯಲ್ಲಿರುವವ ನಾಳೆ ಕಾಂಗ್ರೆಸ್‌ನ ಅಭ್ಯರ್ಥಿಯಾಗುತ್ತಾನೆ. ಇದು ಎಲ್ಲಾ ಪಕ್ಷಗಳಿಗೂ ಅನ್ವಯವಾಗುತ್ತದೆ. ಪಕ್ಷಗಳು ಗೆದ್ದ ಮೇಲೆ ವಿರೋಧಿಗಳೊಂ ದಿಗೂ ಹೊಂದಾಣಿಕೆ ಮಾಡಿಕೊಂಡು ರಾಜ್ಯಭಾರ ಮಾಡುತ್ತಾರೆ. ತಮ್ಮ ಶಕ್ತಿಗಳಿಗೆ ಅನುಗುಣವಾಗಿ ಸಣ್ಣ ಸಣ್ಣ ರಾಜರುಗಳು ಆಗುತ್ತಾರೆ. ಕಪ್ಪ ಪಡೆಯುತ್ತಾರೆ. ಆದರೆ ಈ ದ್ವೇಷಪೂರಿತ ಚುನಾವಣೆಯಲ್ಲಿ ಭಾಗವಹಿಸುವ ಮತದಾರರು ತಮ್ಮ ತಮ್ಮ ನಾಯಕರನ್ನು, ಪಕ್ಷವನ್ನು ಅನುಸರಿಸುವ ಭರಾಟೆಯಲ್ಲಿ ಪರಸ್ಪರ ದ್ವೇಷಿಗಳಾಗಿ, ವಿಭಜನೆಗೊಂಡು ಊರಿನ ಬೆಳವಣಿಗೆಯಲ್ಲಿ ದೂರ ದೂರ ನಿಲ್ಲುವಂತಾಗುತ್ತಾರೆ. ಇದು ನಮ್ಮ ಊರಿನ, ದೇಶದ ದುರಂತಕ್ಕೆ ಕಾರಣ ವಾಗಬಹುದು. ಇದಕ್ಕೆ ಪರಿಹಾರವೆಂದರೆ ಪ್ರತಿಯೊಬ್ಬ ಮತದಾರರಿಗೆ ಆಡಳಿತವನ್ನು, ಪ್ರತಿನಿಧಿಯನ್ನು ಪ್ರಶ್ನಿಸಿ, ವಿಚಾರಿಸಿ, ಪರಿಶೀಲಿಸಿ ಆಯ್ಕೆ ಮಾಡುವ ಅಧಿಕಾರ ನೀಡುವುದೇ ಆಗಿದೆ.

ಬ್ರಿಟಿಷರನ್ನು ಓಡಿಸುವುದೇ ಸ್ವಾತಂತ್ರ್ಯವಲ್ಲ : ದುರ್ಬಲರಿಗೆ ಸಮಾನಾವಕಾಶ, ನ್ಯಾಯ, ಆತ್ಮವಿಶ್ವಾಸದ ಕೊಡುಗೆಯೇ ಸ್ವಾತಂತ್ರ್ಯ:
ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಪ್ರತಿಪಾದನೆಯನ್ನು ಎಲ್ಲರೂ ಓದಬೇಕು. ಗ್ರಾಮದ ಜನತೆ ತಮಗೆ ಬೇಕಾದ ಆಡಳಿತವನ್ನು ಪಡೆಯಲು ಶ್ರಮಿಸುವ, ಸಾಮರ್ಥ್ಯವಿರುವ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾನದ ಶಕ್ತಿಯನ್ನು ಉಪಯೋಗಿ ಸುವಂತಾಗಬೇಕು. ಈಗಿನಂತೆ ಕೇಂದ್ರ ದಲ್ಲಿರುವ ಪಕ್ಷಾಧಾರಿತ ರಾಜರುಗಳ ಪ್ರತಿನಿಧಿಗಳ ಆಯ್ಕೆಗಾಗಿ ಅಲ್ಲ. ಈಗಿನ ಆಡಳಿತ ವ್ಯವಸ್ಥೆಯಲ್ಲಿ
ಮೇಲಿನಿಂದ ಕೆಳಗೆ ಇರುವ ಆಡಳಿತದ ಬದಲು ಕೆಳಗಿನಿಂದ ಮೇಲೆ ಆಡಳಿತ ಎಂದಾಗಬೇಕು. ಮಹಾತ್ಮಗಾಂಧಿಯವರು ಕೇಂದ್ರದಲ್ಲಿ ಕುಳಿತುಕೊಳ್ಳುವ ಇಪ್ಪತ್ತು ಮಂದಿಯಿಂದ ದೇಶವನ್ನು ಅರ್ಥ ಮಾಡಿಕೊಂಡು ಆಡಳಿತ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಗ್ರಾಮ ಸ್ವಾವಲಂಬಿಯಾಗಿ ಅಲ್ಲಿಯ ಜನತೆಯಿಂದ ಗ್ರಾಮ ಸ್ವರಾಜ್ಯದ ಆಡಳಿತ ನಡೆದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. ಬ್ರಿಟಿಷರನ್ನು ಓಡಿಸುವುದು ಸಂಪೂರ್ಣ ಸ್ವಾತಂತ್ರವಲ್ಲ. ಅದು ಸ್ವಾತಂತ್ರದ ಕಡೆಗೆ ಒಂದು ಹಜ್ಜೆ. ನಿಜವಾದ ಸ್ವಾತಂತ್ರ್ಯ ಎಂದರೆ ದೇಶದ ಪ್ರತಿಯೊಂದು ಹಳ್ಳಿಯ ದುರ್ಬಲ, ಶೋಷಿತ ವ್ಯಕ್ತಿ, ಮಹಿಳೆಗೆ ಸಮಾನಾವಕಾಶ, ನ್ಯಾಯ ದೊರಕಿ ಸ್ವಾವಲಂಬಿಯಾಗಿ ಆತ್ಮವಿಶ್ವಾಸದಿಂದ ತಲೆ ಎತ್ತಿ ನಿಲ್ಲುವಂತಾಗುವುದೇ ನಿಜವಾದ ಸ್ವಾತಂತ್ರ್ಯ ಎಂದಿದ್ದಾರೆ.

ಬ್ರಿಟಿಷರ ಸ್ಥಾನದಲ್ಲಿ ಜನಪ್ರತಿನಿಧಿಗಳು ಕುಳಿತಿದ್ದಾರೆ: ಅವರ ಕಾನೂನುಗಳು ಅನುಷ್ಠಾನದಲ್ಲಿವೆ:
ಈ ಹಿಂದೆ ಹಲವಾರು ಬಾರಿ ಬರೆದಂತೆ ಬ್ರಿಟಿಷರು ಬಿಟ್ಟು ಹೋದ ಮೇಲೆ ಅವರ ಸ್ಥಾನದಲ್ಲಿ ಕುಳಿತುಕೊಂಡ ಜನಪ್ರತಿನಿಧಿಗಳು, ಪಕ್ಷಗಳು ಅವರಂತೆ ರಾಜರುಗಳಾಗಿದ್ದಾರೆ. ಬ್ರಿಟಿಷರ ಕಾಲದಿಂದಲೂ ಜನರ ದಬ್ಬಾಳಿಕೆಗಾಗಿ ಮತ್ತು ಜನರಿಂದ ಕಪ್ಪ ವಸೂಲಿ ಮಾಡಲು ನಡೆಯುತ್ತಿದ್ದ ಕಾನೂನುಗಳನ್ನು, ಆಡಳಿತ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬ್ರಿಟಿಷರ ಕಾಲದಲ್ಲಿ ಅನುಷ್ಠಾನದಲ್ಲಿದ್ದ ಕಾನೂನುಗಳು ಈಗಲೂ ಮುಂದುವರಿಯುತ್ತಿರುವುದು ಅದಕ್ಕೆ ಉತ್ತಮ ಸಾಕ್ಷಿ. ನಮ್ಮ ಸ್ಥಳದಲ್ಲಿರುವ ಮರ, ಕಾಡಿನ ಮರಗಳು ಅರಣ್ಯ ಇಲಾಖೆಯದ್ದಾಗಿದೆ. ಅವರ ಅನುಮತಿಯಿಲ್ಲದೆ ಅದನ್ನು ನಾವು ಮುಟ್ಟುವಂತಿಲ್ಲ. ನಮ್ಮ ಜಮೀನು ರೆವಿನ್ಯೂ ಇಲಾಖೆಯದ್ದಾಗಿದೆ. ರಸ್ತೆ ಕಾಮಗಾರಿಗಳು, ಪಿಡಬ್ಲ್ಯೂಡಿ ಇಲಾಖೆಯದ್ದಾಗಿದೆ. ವಿದ್ಯುತ್ ಸಂಪರ್ಕ ಮೆಸ್ಕಾಂನದ್ದಾಗಿದೆ. ಕಾನೂನು ಪೊಲೀಸ್ ಇಲಾಖೆಯದ್ದಾಗಿದೆ. ಆ ಇಲಾಖೆಯು ನಮ್ಮಿಂದ ಪಡೆಯುವ ಸುಲಿಗೆ ಹಣವನ್ನು ಅವರ ಮೇಲಿನವರಿಗೆ, ಅವರು ಅವರ ಮೇಲಿನವರಿಗೆ ಕೊಡುತ್ತಾರೆ. ಅವರನ್ನು ನೇಮಿಸುವ, ವರ್ಗಾಯಿಸುವ, ಶಿಕ್ಷಿಸುವ ಶಕ್ತಿ, ಅಧಿಕಾರ ಇರುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮಂತ್ರಿಗಳಿಗೆ (ರಾಜರುಗಳಿಗೆ) ಅಂತಿಮವಾಗಿ ಆ ಕಪ್ಪ ಸಲ್ಲುತ್ತದೆ.
ಇದನ್ನು ನಿಮ್ಮ ಊರಿನಲ್ಲಿರುವ ಯಾವುದೇ ಅಧಿಕಾರಿಯನ್ನು, ಜನಪ್ರತಿನಿಧಿಯನ್ನು ವಿಚಾರಿಸಿ, ಪರಶೀಲಿಸಿ ತಿಳಿದುಕೊಳ್ಳಬಹುದು

ನಮ್ಮ ತೆರಿಗೆಯ ಹಣ ಎಲ್ಲಿಗೆ ಹೋಗುತ್ತದೆ?. ಸರಕಾರದಿಂದ ಬರುವ ಹಣ ದಾನವೇ?
ನಾವು ನೀಡುತ್ತಿರುವ ತೆರಿಗೆಯನ್ನು ಕೂಡ ನೋಡಿ. ದೈನಂದಿನ ಜೀವನಕ್ಕಾಗಿ ಅಗತ್ಯ ಇರುವ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯ ಮೇಲೆ ಶೇ.೪೦ರಷ್ಟು ತೆರಿಗೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೀಡುತ್ತಿzವೆ. ವಾಹನ ಖರೀದಿಗೆ, ಬಿಡಿಭಾಗಗಳಿಗೆ ತೆರಿಗೆ ಕಟ್ಟುತ್ತೇವೆ. ರಸ್ತೆಗಿಳಿಸಲು ರೋಡ್ ಟ್ಯಾಕ್ಸ್ ಕಟ್ಟುತ್ತೇವೆ. ನಾವು ಕಟ್ಟುವ ತೆರಿಗೆಗಳನ್ನು ಪಟ್ಟಿಮಾಡಿ. ಆದರೂ ನಮ್ಮ ರಸ್ತೆಗಳ ಸ್ಥಿತಿ ಹೇಗಿದೆ ಎಂದು ವಿಚಾರಿಸಿ ನೋಡಿ. ಇದು ಸರಿಯಾಗಬೇಕೆಂದಿದ್ದರೆ ಅದಕ್ಕೆ ಜವಾಬ್ದಾರರು ಯಾರು?. ನಮ್ಮ ಶಾಲೆಗಳು, ಸರಕಾರಿ ಆಸ್ಪತ್ರೆಗಳೂ ವಿದ್ಯುತ್ ಸಂಪರ್ಕ ಎಲ್ಲವನ್ನೂ ಪರಿಶೀಲನೆ ಮಾಡಿ. ಅದಕ್ಕೆ ಹಣ ಬೇಕಾಗಿದ್ದರೆ ಮೇಲಿನವರು (ರಾಜರು) ನೀಡುವ ಹಣವನ್ನು (ಭಿಕ್ಷೆಯನ್ನು) ದಾನವೆಂದು, ಪ್ರಸಾದವೆಂದು ಕಣ್ಣಿಗೆ ಒತ್ತಿಕೊಂಡು ಅವರ ಫೋಟೊವನ್ನು ಹಾಕಿ ಹೊಗಳಿ ಸ್ವೀಕರಿಸಬೇಕು. ಆ ಹಣ ಬಾರದೆ ಇದ್ದರೆ ರಾಜ್ಯವನ್ನು, ಆ ಕೇಂದ್ರವನ್ನು ಮನಸ್ಸಲ್ಲಿ ಬಯ್ಯುತ್ತಾ ನಮ್ಮ ಹಣೆಬರಹವನ್ನು ಹೇಳಿಕೊಳ್ಳುತ್ತಾ ಅದನ್ನು ಸಹಿಸಿಕೊಂಡಿರಬೇಕು. ಹಾಗೆ ದಾನವಾಗಿ ಬಂದ ಆ ಹಣದ ದುರುಪಯೋಗವನ್ನು ಪ್ರಶ್ನಿಸುವ ಹಕ್ಕು, ಶಕ್ತಿ ನಮಗಿರುವುದಿಲ್ಲ. ಯಾಕೆಂದರೆ ಅವರ ಕಡೆ ಬೆಂಬಲಕ್ಕೆ ಜನಪ್ರತಿನಿಧಿಗಳು, ಪಕ್ಷಗಳು ಇರುತ್ತದೆ.

ಬಲಾತ್ಕಾರದ ಬಂದ್‌ಗೆ ವಿರೋಧ ಕಾನೂನು ರಾಜ್ಯ ಮತ್ತು ಕೇಂದ್ರದಲ್ಲಿ ಬರಲಿ:
ಈ ಪದ್ಧತಿಯಿಂದ ಹೊರಗೆ ಬರಬೇಕಾದರೆ ಮತದಾನದ ಜಾಗೃತಿ ಉಂಟಾಗಬೇಕು. ಪ್ರತಿಯೊಬ್ಬ ಮತದಾರ ಪ್ರತಿನಿಧಿಯನ್ನು ಪ್ರಶ್ನಿಸಿ ಮತ ನೀಡುವಂತಾಗಬೇಕು. ಅದರ ಆಧಾರಿತವಾಗಿ ಪಕ್ಷ ಮತ್ತು ವ್ಯಕ್ತಿ ಆಯ್ಕೆಯಾಗಬೇಕು. ಇಲ್ಲದಿದ್ದರೆ ಐದು ವರ್ಷಗಳಿಗೊಮ್ಮೆ ಮತದಾನದ ಒಂದು ದಿನ ರಾಜನಂತಾಗಿ ನಂತರ ಗುಲಾಮನಂತೆ ಬದುಕಬೇಕಾಗುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆಯೂ ಹಲವಾರು ಬಾರಿ ಬರೆದಿದ್ದೆನೆ. ಆದರೆ ಇಲ್ಲಿನ ಜನರು ಗ್ರಾಮ ಸ್ವರಾಜ್ಯದಡೆಗೆ ಚಿಂತನೆ ಮಾಡದಿದ್ದರೆ ಯಾವುದೇ ಒಳ್ಳೆಯ ವಿಷಯವನ್ನು ಒಪ್ಪಿದರೂ ಅದನ್ನು ಅನುಷ್ಠಾನ ಮಾಡಲಾಗುವುದಿಲ್ಲ. ಉದಾಹರಣೆಗೆ ನಾವು ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣದ ದುರುಪಯೋಗ, ಅಪರಾಧ ಮುಕ್ತ ತಾಲೂಕು ಬಗ್ಗೆ ಆಂದೋಲನ ಮಾಡಿದ್ದೇವೆ. ಬಲಾತ್ಕಾರದ ಬಂದ್‌ಗೆ ತಾಲೂಕಿನ ಶೇ.99 ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಲಾತ್ಕಾರದ ಬಂದ್‌ನ್ನು ಸಂಪೂರ್ಣವಾಗಿ ವಿರೋಧಿಸುವ ಶಕ್ತಿ ಉಂಟಾಗಿಲ್ಲ. ಯಾಕೆಂದರೆ ಇಲ್ಲಿಯ ರಾಜಕೀಯ ಪಕ್ಷಗಳು, ಸಂಘಟನೆಗಳು ಇದನ್ನು ಒಪ್ಪಿದರೂ ರಾಜ್ಯ ಮತ್ತು ದೆಹಲಿಯಿಂದ ಬಂದ್‌ಗೆ ಕರೆ ಬಂದರೆ ಅನಿವಾರ್ಯವಾಗಿ ಇಲ್ಲಿ ಬಂದ್‌ಗೆ ಕರೆ ಕೊಡುತ್ತಾರೆ. ಯಾಕೆಂದರೆ ಅವರ ಭವಿಷ್ಯತ್ತಿನ ಟಿಕೇಟ್ (ರಾಜರುಗಳ ಪಟ್ಟ) ಅಲ್ಲಿಂದ ದೊರಕುತ್ತದೆ. ಅದರ ಬದಲು ಕೇಂದ್ರದಲ್ಲಿಯೇ ಬಂದ್ ವಿರೋಧಿ ಕಾನೂನು ಅನುಷ್ಠಾನಕ್ಕೆ ಬಂದರೆ ಅಥವಾ ನಮ್ಮ ಪ್ರತಿನಿಧಿಗಳ ಗೆಲ್ಲುವ ಟಿಕೆಟ್ ಇಲ್ಲಿಂದ ಎಂದಾದರೆ ಮತ್ತು ಇಲ್ಲಿಯ ಜನತೆ ಅವರನ್ನು ತಮ್ಮ ಪ್ರತಿನಿಧಿ ಎಂದು ಆಯ್ಕೆ ಮಾಡಿದರೆ ಮಾತ್ರ ಅವರು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು. ನಮ್ಮ ಪರವಾಗಿ ಕೇಂದ್ರದ, ರಾಜ್ಯದ ವಿರುದ್ಧವೂ ಮಾತನಾಡಬಲ್ಲರು ಎಂಬುವುದರ ಅರಿವು ನಮಗಾಗಿದೆ.

ದೇಶದ ಕೇಂದ್ರದಿಂದ ತಾಲೂಕಿನ ಹಳ್ಳಿಗಳಿಗೆ ಆಂದೋಲನದ ಹೆಜ್ಜೆ:
ಈ ಹಿನ್ನೆಲೆಯಲ್ಲಿ ನಮ್ಮ ಆಂದೋಲನದ ಉದ್ಧೇಶವನ್ನು ಜನಾಭಿಪ್ರಾಯವನ್ನು ರಾಜ್ಯದ ಮತ್ತು ಕೇಂದ್ರ ನಾಯಕರುಗಳಿಗೆ, ಪಕ್ಷಗಳಿಗೆ ಮುಟ್ಟಿಸುವ ಅಗತ್ಯತೆ ಇದೆ. ಅದಕ್ಕಾಗಿ ಮತ್ತು ಜಿಲ್ಲೆಯಾದ್ಯಂತ ಇರುವ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಹಾಗೂ ಗ್ರಾಮ ಸ್ವರಾಜ್ಯದ ಅನುಷ್ಠಾನಕ್ಕಾಗಿ ಈ ಚುನಾವಣೆಯಲ್ಲಿ ಪ್ರಮುಖ ರಾಜರುಗಳ (ಪಕ್ಷಗಳ) ಎದುರು ಸ್ಪರ್ಧಿಸಿ ಅವರಿಗೆ ನಮ್ಮ ಅಭಿಪ್ರಾಯವನ್ನು ತಲುಪಿಸಲಿದ್ದೇನೆ. ಈ ಆಂದೋಲನವನ್ನು ದೇಶದ ಕೇಂದ್ರದಿಂದ ಪ್ರಾರಂಭಿಸಿ ನಂತರ ಗ್ರಾಮ ಗ್ರಾಮಗಳಲ್ಲಿ ಹರಡಲಿzವೆ. ಪ್ರಮುಖವಾಗಿ ನಮ್ಮ ತಾಲೂಕುಗಳಲ್ಲಿ ಮತ್ತು ಈ ಜಿಲ್ಲೆಯಲ್ಲಿ ಅದನ್ನು ಮಾಡಲಿದ್ದೇವೆ. ಆದುದರಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಇಲ್ಲಿಯ ಜನತೆಯ ಅಭಿಪ್ರಾಯವನ್ನು ರಾಜ್ಯಕ್ಕೋ ಕೇಂದ್ರಕ್ಕೋ ಒಟ್ಟಿನಲ್ಲಿ ಅದು ತಲುಪಬೇಕಾದಲ್ಲಿಗೆ ಮುಟ್ಟಿಸುವ ಪ್ರಯತ್ನ ಮಾಡಲಿದ್ದೇನೆ. ಈ ನಿಟ್ಟಿನಲ್ಲಿ ಜನತೆಯ ಸಲಹೆ ಸೂಚನೆಗಳನ್ನು ಸ್ವೀಕರಿಸಲಿದ್ದೇನೆ. ಎಲ್ಲಿಂದ ಮತ್ತು ಯಾರ ವಿರುದ್ಧ ಎಂಬುವುದನ್ನು ಜನಾಭಿಪ್ರಾಯದ ನಂತರ ನಿರ್ಧರಿಸಲಿದ್ದೇನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.