ಎಳಚಿತ್ತಾಯನಗರ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ ಘೋಷಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬಹುವರ್ಷಗಳಿಂದ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಯಿಂದ ತೀವ್ರ ತೊಂದರೆ ಎದುರಿಸುತ್ತಿರುವ ನಾವು ಈ ಬಾರಿ ಇದೇ ಕಾರಣ ಮುಂದಿಟ್ಟು ಪ್ರಜಾತಂತ್ರ ವ್ಯವಸ್ಥೆಯಡಿ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಬೆಳ್ತಂಗಡಿ ನಗರದಿಂದ ಕೇವಲ ಒಂದೂವರೆ ಕಿ.ಮೀ ಮಾತ್ರ ದೂರದಲ್ಲಿರುವ ಎಳಚಿತ್ತಾಯ ನಗರದ ನಿವಾಸಿಗಳು ಘೋಷಿಸಿದರು.
ಬೆಳ್ತಂಗಡಿ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ನಾಗರಿಕರ ಪರವಾಗಿ ಲಕ್ಷ್ಮಣ್ ಜಿ.ಎಸ್ ಇವರು ಮಾಹಿತಿ ನೀಡಿದರು.

ನಮ್ಮ ಗ್ರಾಮದಲ್ಲಿ 3 ಗ್ರಾಮ ಪಂಚಾಯತ್‌ಗಳು ಒಳಗೊಳ್ಳುತ್ತದೆ. ಉಜಿರೆ ಗ್ರಾಮಕ್ಕೆ ಸಂಬಂಧಪಟ್ಟಂತೆ 40 ಮನೆಗಳು, ಕೊಯ್ಯೂರು ಗ್ರಾಮಕ್ಕೆ ಸಂಬಂಧಿಸಿ 10-20 ಮನೆಗಳು, ಲಾಯಿಲ ಗ್ರಾಮಕ್ಕೆ ಸಂಬಂಧಿಸಿದಂತೆ 30 ಮನೆಗಳು ಇದ್ದು ನಮ್ಮ ಗ್ರಾಮದ ಸಮಸ್ಯೆಗೆ ಈ ಮೂರೂ ಗ್ರಾಮಗಳು ನಿರ್ಲಕ್ಷ್ಯ ವಹಿಸಿದೆ. ಯಳಚಿತ್ತಾಯ ನಗರದಲ್ಲಿ 15 ರಷ್ಟು ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳಿವೆ. ಒಟ್ಟು 100 ಕುಟುಂಬಗಳು, 300 ರಷ್ಟು ಮತದಾರರು ಹಾಗೂ ಸಮಾರು 500 ರಷ್ಟು ಜನಸಂಖ್ಯೆ ಇರುವ ಈ ಪ್ರದೇಶದ ಅಭಿವೃದ್ಧಿಯನ್ನು ಎಲ್ಲ ಜನಪ್ರತಿನಿಧಿಗಳು, ಎಲ್ಲ ರಾಜಕೀಯ ವ್ಯಕ್ತಿಗಳು ನಿರ್ಲಕ್ಷ್ಯಿಸಿದ್ದಾರೆ. ರಾಜಕೀಯ ಸಂದರ್ಭ ಎಲ್ಲ ರಾಜಕೀಯ ಪಕ್ಷಗಳ ಹಾಲಿ, ಮಾಜಿ ಮತ್ತು ಭಾವೀ ಜನಪ್ರತಿನಿಧಿಗಳು ಧಾವಿಸಿ ಮತದಾರರಿಗೆ ಆಶ್ವಾಸನೆ ನೀಡಿ ತೆರಳುತ್ತಾರೆ.ಆದರೆ ಚುನಾವಣೆ ದಾಟಿದ ಬಳಿಕ ಇತ್ತ ತಲೆಹಾಕಿಯೂ ಮಲಗುವುದಿಲ್ಲ, ಶಾಸಕ ಹರೀಶ್ ಪೂಂಜ ಅವರಿಗೂ ಪ್ರಾರಂಭದಲ್ಲೇ ಕಾಲನಿ ನಿವಾಸಿಗಳೆಲ್ಲರೂ ಸೇರಿ ಮನವಿ ನೀಡಲಾದರೂ ಅವರು ನೀಡಿದ ಭರವಸೆಯೂ ಸುಳ್ಳಾಗಿದೆ. ಕಾಲನಿ ನಿವಾಸಿಗಳಿಗೆ ನಮ್ಮ ಮೂಲಭೂತ ಸೌಕರ್ಯಗಳ ಬೇಡಿಕೆಗೆ ಸ್ಪಂದಿಸದ ರಾಜಕೀಯ ವ್ಯಕ್ತಿಗಳ ಬಗ್ಗೆ, ಮತ್ತು ಮಾಜಿ-ಹಾಲಿ ಶಾಸಕರ ಬಗ್ಗೆ ಜಿಗುಪ್ಸೆ ಬಂದಿದ್ದು ಇದೇ ಕಾರಣ ಕಾಲೋನಿಯ ಎಲ್ಲಾ ಮತದಾರರ ಬಂಧುಗಳು ಪಕ್ಷಾತೀತವಾಗಿ ಒಂದಾಗಿದ್ದು, ಸಭೆ ನಡೆಸಿ ಈ ಬಾರಿಯ ಚುನಾವಣೆ ಬಹಿಷ್ಕರಿಸುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಯಾವ ಭರವಸೆಗೂ ಜಗ್ಗುವುದಿಲ್ಲ:
ನಮಗೆ ಅನೇಕ ವರ್ಷಗಳಿಂದ ಭರವಸೆ ನಂಬಿ ಮೋಸ ಹೋದ ಅನುಭವ ಇದೆ. ಆದ್ದರಿಂದ ಈ ಬಾರಿ ಯಾರೇ ಬಂದು ಭರವಸೆ ನೀಡಿದರೂ ನಾವು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಬಂದವರು, ನಿಮಗೆ 10 ಲಕ್ಷ ಇಟ್ಟಿದ್ದೇವೆ. 15 ಲಕ್ಷ ಇಟ್ಟಿದ್ದೇವೆ. ಮುಂದಿನ ವಾರದಿಂದಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಆ ರೀತಿಯ ಭರವಸೆ ನೀಡಿದ್ದೂ ಸುಳ್ಳೆಂದು ತಿಳಿದಿದೆ. ಆದ್ದರಿಂದ ಈ ಬಾರಿ ಯಾವ ಭರವಸೆ ಬಗ್ಗೆಯೂ ನಮಗೆ ನಂಬಿಕೆ ಇಲ್ಲ. ಇಂದೇ ನಮ್ಮ ಗ್ರಾಮದಲ್ಲಿ ಬ್ಯಾನರ್ ಅಳವಡಿಸಲಿದ್ದೇವೆ. ಈಗಲಾದರೂ ನಮ್ಮ ಮಕ್ಕಳು ದೂರದ ಕೊಳೆಂಜಿರೋಡಿ ಎಂಬಲ್ಲಿಗೆ ಅಂಗನವಾಡಿಗೆ ಹೋಗುವ ಸಮಸ್ಯೆ ಅರ್ಥವಾಗಲಿ. ಒಂದೇ ಮಳೆಗೆ ನಮ್ಮ ರಸ್ತೆಯ ಮಧ್ಯೆಯೇ ನೀರು ಹರಿದು ಕೃತಕ ಚರಂಡಿಯಾಗುತ್ತಿರುವುದು ತಿಳಿಯುವಂತಾಗಲಿ. ಬೆಳ್ತಂಗಡಿ ನಗರದ ಅತೀ ಹತ್ತಿರದಲ್ಲಿರುವ ನಮ್ಮ ಪ್ರದೇಶದ ಈ ಸಮಸ್ಯೆ ನಾಡಿಗೆ ತಿಳಿಯುವಂತಾಗಲಿ ಎಂದು ಆಕ್ರೋಶದಿಂದ ಪ್ರತಿಕ್ರಿಯಿಸಿದರು.

ಮತಕೇಳಲೂ ಅವಕಾಶ ಕೊಡೆವು:
ನಾವು ಇದೀಗ ಒಗ್ಗಟ್ಟಾಗಿದ್ದೇವೆ. ನಮ್ಮ ಆಕ್ರೋಶವನ್ನು ಈ ಬಾರಿ ವಿಭಿನ್ನವಾಗಿ ವ್ಯಕ್ತಪಡಿಸಲು ತೀರ್ಮಾನಿಸಿದ್ದೇವೆ. ಈ ಬಾರಿ ಯಾವುದೇ ಪಕ್ಷದವರೇ ಇರಲಿ. ನಮ್ಮ ಪ್ರದೇಶಕ್ಕೆ ಮತಯಾಚನೆಗೆ ಬಂದರೆ ಅವರಿಗೆ ದಿಗ್ಬಂಧನ ಹಾಕಲು ತೀರ್ಮಾನಿಸಿದ್ದೇವೆ. ಇದರಿಂದ ಘರ್ಷಣೆಯಾಗುವುದಾದರೆ ಅದನ್ನು ಒಗ್ಗಟ್ಟಿನಿಂದ ಎದುರಿಸಲು 100 ಮಂದಿಯ ತಂಡ ಕಟ್ಟಿಕೊಂಡಿದ್ದೇವೆ. ಯಾವ ಹೋರಾಟಕ್ಕೂ ನಾವು ಕಠಿಬದ್ಧರಾಗಿದ್ದೇವೆ ಎಂದರು.
ಗೋಷ್ಠಿಯಲ್ಲಿ ರವಿ ಜೋಗಿ, ರವಿಚಂದ್ರ, ಲಕ್ಷ್ಮೀ ರವಿಕುಮಾರ್, ರೇವತಿ ರಮೇಶ್ ನಾಯಕ್, ಯಮುನಾ ರವಿಶಂಕರ್ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.