ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿಈ ವಾರ

ವಿಜಯ ಬ್ಯಾಂಕ್ ವಿಲೀನದಲ್ಲಿ ನಳಿನ್ ವೈಫಲ್ಯ ಬ್ಯಾಂಕ್ ರಾಷ್ಟ್ರೀಕರಣಗೊಳಿಸಿದವರು ಯಾರು?

ಸೋಷಿಯಲ್ ಮೀಡಿಯಾದಲ್ಲಿ ಈ ವಾರ ಅತೀ ಹೆಚ್ಚು ಚರ್ಚೆಯಾದ ವಿಚಾರ ವಿಜಯ ಬ್ಯಾಂಕ್ ಬರೋಡಾ- ದೇನಾ ಬ್ಯಾಂಕ್‌ಜೊತೆ ವಿಲೀನ ವಿಚಾರ. ಗುಜರಾತಿನ ಮಾರ್ವಾಡಿಗಳಿಗೆ ಜಿಲ್ಲೆಯ ಹೆಮ್ಮೆಯ ಹಾಗೂ ಬಹುಕೋಟಿ ರೂ. ಲಾಭದಲ್ಲಿರುವ ವಿಜಯ ಬ್ಯಾಂಕನ್ನು ಮಾರಿದ ಬೆಂಕಿ ಸಂಸದ ಎಂದು ಹಲವರು ತಮ್ಮ ಪ್ರೊಫೈಲ್‌ನಲ್ಲಿ ಹಾಕಿಕೊಂಡಿದ್ದಾರೆ. ಇದೇ ವಿಚಾರ ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆ ಉದ್ಘಾಟನೆ ವೇದಿಕೆಯಲ್ಲೂ ಪ್ರತಿಧ್ವನಿಸಿದೆ. ಅಲ್ಲದೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮತ್ತು ಮಾಜಿ ಶಾಸಕ ವಸಂತ ಬಂಗೇರ ಬೆಳ್ತಂಗಡಿ ವಿಜಯ ಬ್ಯಾಂಕ್ ಶಾಖೆಯ ಬಳಿ ಗೋಡೆಗೆ ಮೊಳೆ ಹೊಡೆದು ಪ್ರತಿಭಟನೆ ನಡೆಸಿದ್ದೂ ಸೋಷಿಯಲ್ ಮೀಡಿಯಾದದಲ್ಲಿ ಪ್ರಚಾರ ಪಡೆದಿತ್ತು. ಈ ವಿಚಾರವಾಗಿ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು, ಹಿಂದೆ 2 ಬಾರಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದು ಯಾರು ಎಂದು ಕಾಂಗ್ರೆಸ್ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ ಎಂದು ಲೇವಡಿಯನ್ನೂ ಮಾಡಿದ್ದಾರೆ. ಈ ನಡುವೆ ವಿಜಯ ಬ್ಯಾಂಕ್ ವಿಚಾರವಾಗಿ ಜಿಲ್ಲೆಯ ತುಳು ಸಿನಿಮಾ ನಟ ದೂರವಾಣಿಯಲ್ಲಿ ಮಾತನಾಡುವ ಭಾವ ಚಿತ್ರ ಪ್ರಕಟಿಸಿ, ನಳಿನನ್ನಾ….ವಿಜಯ ಬ್ಯಾಂಕ್ ಮಾರ್‍ವಾಡಿನಕುಲೆಗೆ ಮಾರ್‍ಯಾರ್‌ಗೆತ್ತಾ… ಎಂದು ಹೇಳುವ ವಾಕ್ಯ ಬರೆದು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ.

ನಳಿನ್ ಓಂಟೆ….ದೋಂಟೆ.. ಸೋಂಟೆ
ಬೋಂಟೆ ವಸಂತಣ್ಣ… ನೀವು ಮಾಡಿದ್ದೂ ಸೋಂಟೆ
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಲೇವಡಿ ಮಾಡಿ, ನಮ್ಮ ಅಭ್ಯರ್ಥಿ ಮಿಥುನ್ ಯುವಕ, ಎದುರು ನಿಂತವ ಓಂಟೇ…೧೦ ವರ್ಷದಲ್ಲಿ ದೋಂಟೆ…,೧೦ ವರ್ಷದಲ್ಲಿ ಬೆಳ್ತಂಗಡಿ ತಾಲೂಕಿನ ಒಂದು ಗ್ರಾಮಕ್ಕೆ ಒಂದು ನಯಾಪೈಸೆ ನೀಡಿಲ್ಲ ಸೋಂಟೆ…. ಎಂಬುದಾಗಿ ಹೇಳಿದ್ದನ್ನು ಕಾಂಗ್ರೆಸ್ಸಿಗರು ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆದಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದು, ವಸಂತ ಬಂಗೇರರ ಸೋಂಟೆಗೆ ಕೊತ್ತಲಿಗೆಯಲ್ಲಿ ಹೊಡೆದ ಬಿಜೆಪಿ ಕಾರ್ಯಕರ್ತ ಎಂದು ವಾಯ್ಸ್ ಮೆಸೇಜ್ ಹಾಕಿದ್ದಾರೆ.
ಇದರಲ್ಲಿ, ಓ ಮಾಜಿ ಶಾಸಕರೇ….ಈರ್‍ನ ಪಾತೆರ ಕೇನ್ನಗ ಬರ್‍ಪುಂಡು ಬಾಂತೆ…ಈರ್‍ನಪಿರಾವುಡು ಇಜ್ಜಿ ಇತ್ತೆ ಒಂದು ಸೈತಿನಪಾಂತೆ,,,ಅಧಿಕಾರಡುಪ್ಪುನಗ ಮಂತಿನೆಂಚಿನ ಈರ್ ಪೆರ್ಗುಡೆದ ಮಾಂಟೆ…ಕಡೆಕ್ ಒಂಜಿ ದಿನ ಮಾತೆರೆಗ್ಲಾ ಬೋಡು ಒಂಟೆ…ಜೈ ಬಿಜೆಪಿ, ಜೈ ಮೋದಿ ಎಂದು ವಾಯ್ಸ್ ಕಳಿಸಿದ್ದಾರೆ.

ಸೋಮವಾರ ಸಂತೆ ಇರೂದರಿಂದ ಕಾಂಗ್ರೆಸ್ ಸಭೆಬಿಜೆಪಿ ಯವರು ಸೋಮವಾರ ಸಭೆ ಇಟ್ಟ ಆಮಂತ್ರಣ ಬೇಕೇ?
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆ ಬೆಳ್ತಂಗಡಿಯಲ್ಲಿ ಸೋಮವಾರ ನಡೆದ ಬಗ್ಗೆ ಬಿಜೆಪಿ ಮತ್ತು ಇತರ ಪಕ್ಷಗಳ ಗ್ರೂಪುಗಳಲ್ಲಿ ಮೆಸೇಜ್ ಹರಿದಾಡಿದೆ. ಕಾಂಗ್ರೆಸ್ಸಿಗರು ಸೋಮವಾರ ಸಂತೆ ಇರೂದರಿಂದ ಅಂದೇ ಸಭೆ ನಡೆಸುತ್ತಾರೆ. ಸಂತೆಗೆ ಬಂದ ಜನ ಇರುತ್ತಾರಲ್ಲಾ..
ಜನವೋ ಜನ…..ಭಯಂಕರ ಮಂಡೆ ಮಾರ್ರೆ.. ಎಂದು ಹಾಸ್ಯ ಮಾಡಿದ್ದಾರೆ. ಆದರೆ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೇ ಉತ್ತರ ನೀಡಿರುವ ಕಾಂಗ್ರೆಸ್ಸಿಗರು, ಬಿಜೆಪಿ ಹಿಂದೆ ಸೋಮವಾರ ಸಭೆ ಕರೆದಿದ್ದ ಆಮಂತ್ರಣದಲ್ಲಿ ದಿನಾಂಕಕ್ಕೆ ರೌಂಡ್ ಹಾಕಿ ಪ್ರತ್ಯುತ್ತರ ನೀಡಿದ ವಿದ್ಯಮಾನವೂ ನಡೆದಿದೆ.

ತದನಂತರ…….ಮಗದೊಮ್ಮೆ…..:
ತದನಂತರ ಮೋದಿ….ಮಗದೊಮ್ಮೆ ಮೋದಿ....
ಚುನಾವಣೆಯ ಸಂದರ್ಭವಾಗಿರುವುದರಿಂದ ರಾಜಕೀಯ ಸಂಬಂಧಿ ವಿಚಾರಗಳೇ ಅತೀ ಹೆಚ್ಚು ಟ್ರೋಲ್ ಆಗುತ್ತಿದೆ. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡುವ ವೇಳೆ ಮತ್ತು ವಿಜಯ ಬ್ಯಾಂಕ್ ಹೋರಾಟದ ವೇಳೆ ತದನಂತರ….ಮಗದೊಮ್ಮೆ ಎಂಬ ಪದವನ್ನು ಹೆಚ್ಚು ಬಳಸಿದ್ದನ್ನು ಬಿಜೆಪಿ ಹಾಗೂ ವಿರೋಧ ಪಕ್ಷಗಳು ಟ್ರೋಲ್ ಮಾಡಿದೆ. ಇದೇ ಪದಗನ್ನು ಬಳಸಿಕೋಂಡಿರುವ ಸೋಷಿಯಲ್ ಮೀಡಿಯಾ ಟ್ವೀಟಿಗರು ಇದೇ ತದನಂತರ ಮಾತು ಬಂದಲ್ಲಿಗೆ ಯಾವುದೋ ಟಿವಿ ಶೋದಲ್ಲಿ ಹೊಸರುಚಿ ಅಡುಗೆ ಶೋ ವೀಡಿಯೋದ ತುಣುಕುಗಳನ್ನು ರಿಮಿಕ್ಸ್ ಮಾಡಿ ಹಾಸ್ಯ ಮಾಡಿದ್ದಾರೆ. ಮಿಥುನ್ ಅವರು ತದನಂತರ ಎನ್ನುತ್ತಿರುವಂತೆ ಅತ್ತ ಅಡುಗೆ ತಯಾರಿಯ ಹಂತ ಹಂತಗಳನ್ನು ತದನಂತರ,,,,ತದನಂತರ ಎಂದು ಎಡಿಟ್ ಮಾಡಲಾಗಿದೆ. ಇನ್ನೊಂದೆಡೆ ಮಗದೊಮ್ಮೆ ಪದವನ್ನು ಬಳಸಿ, ಮಾರ್ಚ್‌ನಲ್ಲಿ ತದನಂತರ…ಏಪ್ರಿಲ್‌ನಲ್ಲಿ ಮಗದೊಮ್ಮೆ ಎಂದು ಹಾಸ್ಯ ಮಾಡಲಾಗಿದೆ. ಈ ಮದ್ಯೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯೊಂದರಲ್ಲಿ ತದನಂತರ….ಮೋದಿ,,,,,ಮಗದೊಮ್ಮೆ,,,,,,ಮೋದಿ ಎಂದು ಹೊಸ ಶೈಲಿಯಲ್ಲಿ ಘೋಷಣೆ ಕೂಗಿ ತಮ್ಮೊಳಗೆ ಹುರುಪು ತಂದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.