ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ನಳಿನ್‌ಕುಮಾರ್ ಪ್ರಚಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಲ್ಲಲ್ಲಿ ಕಾರ್ಯಕರ್ತರ ಸಭೆ- ಮತದಾರರ ಮನೆ-ಮನೆ ಭೇಟಿ

ಬೆಳ್ತಂಗಡಿ: ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಅವರು ಎ.೨ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದೆಲ್ಲೆಡೆ ಸಂಚರಿಸಿ ಕಾರ್ಯಕರ್ತರನ್ನು, ಮತದಾರರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು.
ಬೆಳಗ್ಗೆ 7 ಕ್ಕೆ ಕಲ್ಮಂಜ ರಾಮಣ್ಣ ಶೆಟ್ಟಿಯವರ ಮನೆಯಿಂದ ಅವರು ಮತಯಾಚನೆ ಆರಂಭಿಸಿದರು. ಅದಕ್ಕೂ ಮೊದಲು ಅವರು ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ಧರ್ಮಸ್ಥಳ, ಪುದುವೆಟ್ಟು, ಕಳೆಂಜ, ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯಾ, ಕೊಕ್ಕಡ, ನಿಡ್ಲೆ, ಪಟ್ರಮೆ, ಬೆಳಾಲು, ಕೊಯ್ಯೂರು, ಬಂದಾರು, ಮೊಗ್ರು, ಇಳಂತಿಲ, ಕಣಿಯೂರು, ಉರುವಾಲು, ತಣ್ಣೀರುಪಂತ, ಕರಾಯ, ಬಾರ್ಯ, ತೆಕ್ಕಾರು, ಪುತ್ತಿಲ, ಮಚ್ಚಿನ, ಪಾರೆಂಕಿ, ಕುಕ್ಕಳ, ಮಾಲಾಡಿ, ಸೋಣಂದೂರು, ಓಡಿಲ್ನಾಳ, ಕುವೆಟ್ಟು ಗ್ರಾಮಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಹಾಗೂ ಉಸ್ತುವಾರಿ ಆನಂದ ಕೆ, ಬಿಜೆಪಿ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಜಿ.ಪಂ ಸದಸ್ಯರಾದ ಮಮತಾ ಎಂ.ಶೆಟ್ಟಿ, ಕೊರಗಪ್ಪ ನಾಯ್ಕ, ತಾಪಸರಾದ ಶಶಿಧರ ಕಲ್ಮಂಜ, ವಸಂತಿ ಮಡಂತ್ಯಾರು, ಧನಲಕ್ಷ್ಮೀ, ಲಕ್ಷ್ಮೀನಾರಾಯಣ, ಅಮಿತಾ, ಕೃಷ್ಣಯ್ಯ ಆಚಾರ್ಯ, ಲೀಲಾವತಿ, ಸುಶೀಲ, ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ ಬಿ.ಎಸ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಹರಿದಾಸ್ ಗಾಂಭೀರ, ಕೃಷ್ಣಪ್ಪ ಗುಡಿಗಾರ್, ಗೀತಾರಾಮಣ್ಣ ಗೌಡ, ರಕ್ಷಿತ್ ಶೆಟ್ಟಿ, ಶಕ್ತಿ ಕೇಂದ್ರಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಬಾಜೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಿಬಾಜೆ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.