ಎ.6-13: ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ

 ಸಾಮೂಹಿಕ ಯುಗಾದಿ ಆಚರಣೆ

ಬಳಂಜ: ಹಲವಾರು ವರ್ಷಗಳ ಭವ್ಯ ಇತಿಹಾಸವಿರುವ ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾಮಹೋತ್ಸವ ಹಾಗೂ ಸಾಮೂಹಿಕ ಯುಗಾದಿ ಆಚರಣೆಯು ಎ.6 ಶನಿವಾರದಿಂದ ಎ.13 ಶನಿವಾರದವರೆಗೆ ನಡ್ವಂತಾಡಿ ವೇದಮೂರ್ತಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಾಸರದ ಡಾ| ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅಶ್ವತ್ ಹೆಗ್ಡೆ ಬಳಂಜರವರ ಅಧ್ಯಕ್ಷತೆಯಲ್ಲಿ ಅನುವಂಶಿಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳರವರ ಮುಂದಾಳತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆ ಯಿಂದ ಜರಗಲಿದೆ.
* ಎ.5 ರಂದು ಸಂಜೆ 4 ರಿಂದ ಮೆರವಣಿಗೆಯಲ್ಲಿ ಊರವರಿಂದ ಹೊರೆಕಾಣಿಕೆ ಸಮರ್ಪಣೆ ,  ಉಗ್ರಾಣ ಮುಹೂರ್ತ ನಡೆಯಲಿದೆ

ಎ.6 ರಂದು ಸಾಮೂಹಿಕ ಯುಗಾದಿ ಆಚರಣೆ ಹಾಗೂ ಧಾರ್ಮಿಕ ಸಭೆ ಬೆಳಿಗ್ಗೆ ತೋರಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಧ್ವಜಾರೋಹಣ ನಡೆಯಲಿದೆ. ಸಂಜೆ 6 ರಿಂದ ಸಾಮೂಹಿಕ ಯುಗಾದಿ ಆಚರಣೆ ನಡೆದು ಬಳಿಕ   ಧಾರ್ಮಿಕ ಸಭೆ ನಡೆಯಲಿದೆ

* ಎ.7, 8,9,10 ರಂದು ಬೆಳಿಗ್ಗೆ ಕಲಶಾರಾಧನೆ, ಪಂಚಾಮೃತಾಭಿಷೇಕ, ಉತ್ಸವ ಪೂಜೆ, ನಿತ್ಯಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
* ಎ.11ರಂದು ವೈಧಿಕ ವಿಧಿವಿಧಾನ ಪ್ರಾರಂಭ, ಮಧ್ಯಾಹ್ನ ಮಹಾ ಪೂಜೆ ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.
* ಎ.12  ರಂದು ಬೆಳಿಗ್ಗೆ ಸುಮುಹೂರ್ತದಲ್ಲಿ ಕವಾಟೋದ್ಘಾಟನೆ, ದಿವ್ಯದರ್ಶನ ದಶವಿಧ ಸ್ನಾನ, ಪಂಚಾಮೃತಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಚೂರ್ಣೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ರಿಂದ ಬಳಂಜ ಗುತ್ತುವಿನಿಂದ ದೈವಗಳ ಭಂಡಾರ ಬಂದು, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ ಹಾಗೂ ಶ್ರೀ ಪಂಚಲಿಂಗೇಶ್ವರ ಮತ್ತು ದುರ್ಗಾಪರಮೇಶ್ವರಿ ದೇವರ ಶ್ರೀಮನ್ಮ ಮಹಾರಥೋತ್ಸವ ನಡೆಯಲಿದೆ. ದೈವ ಮತ್ತು ದೇವರ ಭೇಟಿ, ಶ್ರೀ ದೇವರ ಅವಭೃತ, ಧ್ವಜಾ ಅವರೋಹಣ ಮಹಾಪೂಜೆ ನಡೆಯಲಿದೆ.
* ಎ.13 ರಂದು ಬೆಳಿಗ್ಗೆ ವೈಧಿಕ ವಿಧಿವಿಧಾನ ಪ್ರಾರಂಭ, ಮಹಾಪೂಜೆ ಮಹಾಮಂತ್ರಾಕ್ಷತೆ, ರಾತ್ರಿ 8 ರಿಂದ ಹಂದ್ಲಾಯಿ ದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಅಶ್ವಥ್ ಹೆಗ್ಡೆ ಬಳಂಜ ತಿಳಿಸಿದ್ದಾರೆ.

ಬಳಂಜ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಮನರಂಜನೆ ಕಾರ್ಯಕ್ರಮಗಳು

* ಎ.6 ರಂದು ಸಂಜೆ 5.30 ರಿಂದ ಜಿಲ್ಲೆಯ ಹೆಸರಾಂತ ಕಲಾವಿದರ ತಂಡದಿಂದ ಪಿಲಿನಲಿಕೆ, ಸಂಜೆ ಗಂಟೆ 6 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ ನಟಿಸಿರುವ ಚಾ ಪರ್‍ಕ ಕಲಾವಿದರಿಂದ ಹಾಸ್ಯಮಯ ತುಳುನಾಟಕ ಯಾನ್ ಪಂಡೆಂದ್ ಪನೊಡ್ಚಿ ನಡೆಯಲಿದೆ,
* ಎ.10 ರಂದು ಸಂಜೆ ಗಂಟೆ 4 ರಿಂದ ಸ್ವಾತಿ ಮ್ಯೂಸಿಕಲ್ಸ್ ಕಾರ್ಯಾಣ ಇವರಿಂದ ಹರಿನಾಮ ಸಂಕೀರ್ತನೆ ನಡೆಯಲಿದೆ. ಸಂಜೆ 7 ರಿಂದ ದ.ಕ.ಜಿ.ಪಂ ಹಿ.ಪ್ರಾ. ಶಾಲೆ ಬಳಂಜ ಇಲ್ಲಿನ ಮಕ್ಕಳಿಂದ ಶ್ರೀ ದೇವಿ ವೈಷ್ಣವಿ ಯಕ್ಷಗಾನ ನಡೆಯಲಿದೆ. ರಾತ್ರಿ9.30ರಿಂದ ಶ್ರೀ ಅಂಬಿಕ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಬಜ್ಪೆ ಇವರಿಂದ ನಾಗರಪಂಚಮಿ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
* ಎ.12 ರಂದು ಸಂಜೆ ಗಂಟೆ 6 ಕ್ಕೆ ಜಿಲ್ಲೆಯ ಹೆಸರಾಂತ ಕಲಾವಿದರಿಂದ ಚೆಂಡೆ ಮತ್ತು ಡೊಳ್ಳು ಜುಗಲ್‌ಬಂದಿ ಹಾಗೂ ಕೀಲುಕುದುರೆ, ವೈವಿಧ್ಯಮಯ ಗೊಂಬೆ ಕುಣಿತ, ವೈಭವೊಪೇತ ಮೆರವಣಿಗೆಯಲ್ಲಿ ಶ್ರೀ ದೈವಗಳ ಭಂಡಾರ ಆಗಮನ ಹಾಗೂ ಸುಡುಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಗಂಟೆ 7 ಕ್ಕೆ ವಿಠಲ ನಾಯಕ್ ಮತ್ತು ಬಳಗ, ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ ಸಂದೇಶದ ಸಂತೋಷ ವಿನೂತನ ಶೈಲಿಯ ಕಾರ್ಯಕ್ರಮ, ರಾತ್ರಿ ಗಂಟೆ 9.30ರಿಂದ ನವ ವೈಭವ ಕಲಾವಿದರು ಮೂಲ್ಕಿ ಚಂದ್ರಶೇಖರ ಸುವರ್ಣ ಪರಿಕಲ್ಪನೆ, ರಚನೆ ನಿರ್ದೇಶನದ ತುಳುನಾಡ ವೈಭವ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.