“ಕಾನೂನು ಮತ್ತು ಮಹಿಳೆ”ವಿಶೇಷ ಉಪನ್ಯಾಸ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
ಕಾನೂನಿನ ಅರಿವು ಯಶಸ್ಸಿಗೆ ಬುನಾದಿ – ಡಾ.ಬಿ.ಕೆ ರವೀಂದ್ರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ ಮಹಿಳಾ ಕೋಶದ ವತಿಯಿಂದ  “ಕಾನೂನು ಮತ್ತು ಮಹಿಳೆ” ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಡಾ. ಬಿ.ಕೆ ರವೀಂದ್ರ ಮತ್ತು ಪ್ರೊ. ಅಕ್ಷತಾ ರವರು ಮಾತನಾಡಿ ಮಹಿಳೆಯರಿಗೆ ಕಾನೂನಿನ ಅರಿವು ತುಂಬಾ ಅಗತ್ಯ.  ವಿದ್ಯಾರ್ಥಿಗಳು ಈಗಿನಿಂದಲೇ ಕಾನೂನುಗಳ ಬಗ್ಗೆ ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕೆಂದರು
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊ. ವಿಶಾಲ್ ಪಿಂಟೋರವರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿಯಾದ ಪ್ರೊ. ಸಂತೋಷ್ ಪ್ರಭುರವರು ಮತ್ತು ಕಾಲೇಜಿನ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹರ್ಷಿತಾ ಸ್ವಾಗತಿಸಿದರು. ಸ್ಮಿತಾ  ವಂದಿಸಿ, ಸಮೀಕ್ಷಾ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.