ಗ್ಲೋಬಲ್ ಬಿಸ್‌ನೆಸ್ ಗ್ರೂಪ್(ಜಿ.ಬಿ.ಜಿ)ಪ್ರೈ.ಲಿ.ವತಿಯಿಂದ ವೈದ್ಯಕೀಯ ನೆರವು

ಹತ್ಯಡ್ಕ: ಇಲ್ಲಿಯ ದರ್ಬೆತಡ್ಕ ನಿವಾಸಿ ವಿಜಯಚಂದ್ರ ರವರಿಗೆ ಇತ್ತೀಚೆಗೆ ತಮ್ಮ ಮನೆಯ ತೋಟದಲ್ಲಿ ಅಡಿಕೆ ಕೀಳುವ ಸಂದರ್ಭದಲ್ಲಿ ತನ್ನ ಎಡದ ಕೈಗೆ ಕೊಯ್ಲಿಗೆ ಬಳಸಿದ್ದ ಕತ್ತಿ ತಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ಗ್ಲೋಬಲ್ ಬಿಸ್‌ನೆಸ್ ಗ್ರೂಪ್ ಅಟೋ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕ ಡಾ|ವಿನೋದ್ ಕುಮಾರ್ ಶೆಟ್ಟಿಯವರು 10ಸಾವಿರ ರೂ.ಗಳ ಸಹಾಯಧನವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಸಂಸ್ಥೆಯ ಸಲಹೆಗಾರರಾದ ರವಿಕುಮಾರ್ ಭಟ್, ಶರತ್ ಕುಮಾರ್, ಹರೀಶ್ ಟಿ, ಸಾಯಿಪ್ರಕಾಶ್, ಪೃಥ್ವಿರಾಜ್ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.